ವಿದ್ಯಾರ್ಥಿ ಜೊತೆ ಶಿಕ್ಷಕಿ ರೊಮ್ಯಾನ್ಸ್..ಕೊನೆಗೆ ಅತ್ಯಾಚಾರ ಪ್ರಕರಣ! ಯುವಕ ಏನಾದ ಗೊತ್ತಾ?

crime 1
Published on

ಇಂದೋರ್​: ಪ್ರೇಮ ಕುರುಡು, ಕಾಮಕ್ಕೆ ಕಣ್ಣಿಲ್ಲ ಎಂದಿರುವುದು ಇಂತಹ ಘಟನೆಗಳನ್ನು ನೋಡೊಯೇ ಇರಬೇಕು. ಸಮಾಜಕ್ಕೆ ವಿದ್ಯಾರ್ಥಿಯನ್ನು ಕೊಡುಗೆಯಾಗಿ ನೀಡಬೇಕಾದ ಶಿಕ್ಷಕಿ ಆತನನ್ನು ತನ್ನ ಚೆಲ್ಲಾಟಕ್ಕೆ ಬಳಸಿಕೊಂಡು ಕಡೆಗೆ ಅವನ ಬಾಳಿಗೆ ಕೊಳ್ಳಿಯಿಟ್ಟಿದ್ದಾಳೆ. ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಇಂದೋರ್‌ನ 19 ವರ್ಷದ ಫಾರ್ಮಸಿ ವಿದ್ಯಾರ್ಥಿ ಗೌರವ್ ಮಂಗಳವಾರ ರಾತ್ರಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗೌರವ್ ಮತ್ತು ಆತನ ಇಂಗ್ಲಿಷ್ ಶಿಕ್ಷಕಿ ಗೌರಿ ತಿವಾರಿ ಕಳೆದ 11 ತಿಂಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಶಿಕ್ಷಕಿ ಗೌರವ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಇಂದೋರ್ ಪೊಲೀಸರು ಗೌರವ್ ನನ್ನು ಬಂಧಿಸಿದ್ದರು. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ಹಿಂಪಡೆಯಲು ಪೊಲೀಸರು 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಗೌರವ್ ತಂದೆ ಗೌರವ್ ಹಡಾ ತಿಳಿಸಿದ್ದಾರೆ. ಆದರೆ 45 ಸಾವಿರ ರೂ.ಕೊಟ್ಟು ಮಗನನ್ನು ಬಿಡಿಸಿದ್ದರು ಎನ್ನಲಾಗಿದೆ.

ಆ ಬಳಿಕ ಮಂಗಳವಾರ ರಾತ್ರಿ ಠಾಣೆಯಿಂದ ಮನೆಗೆ ಮರಳಿದ ಗೌರವ್ ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು, ಬಳಿಕ ಹೊರಗೆ ಬರಲಿಲ್ಲ. ಆತನ ಸಹೋದರಿ ಕೋಣೆಗೆ ಹೋಗಿ ನೋಡಿದಾಗ ಗೌರವ್ ನೇಣು ಬಿಗಿದುಕೊಂಡಿದ್ದಾನೆ. ತಕ್ಷಣ ಕುಟುಂಬಸ್ಥರು ಹತ್ತಿರದ ಎಂವೈ ಆಸ್ಪತ್ರೆಗೆ ಧಾವಿಸಿದಾಗ ಆತ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.

ಬಳಿಕ ಗೌರವ್ ಶವದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರು ಮಹಿಳಾ ಪೊಲೀಸ್ ಠಾಣೆ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು. ಠಾಣೆ ಸಿಐ ಕೌಶಲ್ಯ ಚೌಹಾಣ್ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಆದರೆ ಗೌರವ್ ತನಗೆ ಬೆದರಿಕೆ ಹಾಕಿದ್ದ ಎಂದು ಇಂಗ್ಲಿಷ್ ಶಿಕ್ಷಕಿ ಆರೋಪಿಸಿದ್ದಾರೆ. ಅವರಿಬ್ಬರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಗೌರವ್ ಹೇಳಿರುವುದಾಗಿ ಹೇಳಲಾಗಿದೆ. ಆದರೆ ಗೌರವ್ ತಂದೆ ಆಕೆಯ ಆರೋಪವನ್ನು ನಿರಾಕರಿಸಿದ್ದಾರೆ.

ಕಳೆದ 11 ತಿಂಗಳಿಂದ ಗೌರವ್ ಇಂಗ್ಲಿಷ್ ಕೋಚಿಂಗ್‌ಗಾಗಿ ಆಕೆ ಬಳಿಗೆ ಹೋಗುತ್ತಿದ್ದ. ತನ್ನ ಮಗನಿಗೆ ಹಣ ನೀಡುವಂತೆ ಬೆದರಿಕೆ ಹಾಕಿದ್ದಾಳೆ. ಬೇರೆ ಹುಡುಗಿಯರೊಂದಿಗೆ ಮಾತನಾಡದಂತೆ ತಡೆದಿದ್ದಾಳೆ. ಆದರೆ ಒಂದು ದಿನ ಅವನ ಮಗ ಮನೆಯಲ್ಲಿ ಹಣ ಕದಿಯುವಾಗ ಸಿಕ್ಕಿಬಿದ್ದ. ಏಕೆ ಎಂದು ಕೇಳಿದಾಗ ಇಂಗ್ಲಿಷ್ ಶಿಕ್ಷಕಿ ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ ಎಂದು ಹೇಳಿರುವುದಾಗಿ ಗೌರವ್​ ತಂದೆ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net