

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ವಿವಿಧ ಪರೀಕ್ಷೆಗಳ ದಿನಾಂಕ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಬಿಡುಗಡೆಯಾಗಿದೆ.
ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷಾ ಕ್ಯಾಲೆಂಡರ್ ನೋಡಬಹುದು.
ಜೆಇಇ ಮುಖ್ಯ ಪರೀಕ್ಷೆ ಮತ್ತು ನೀಟ್ 2020 ರ ಪರೀಕ್ಷಾ ದಿನಾಂಕಗಳನ್ನು ಏಜೆನ್ಸಿಯು ಜುಲೈ ನಲ್ಲೇ ಬಿಡುಗಡೆ ಮಾಡಿತ್ತು.
ಯುಜಿಸಿ ನೆಟ್, ದೆಹಲಿ ವಿವಿ ಪ್ರವೇಶ ಪರೀಕ್ಷೆ (ಡಿಯುಇಟಿ), ಐಸಿಎಆರ್ ಎಐಇಇಎ, ಇಗ್ನೋ ಓಪನ್ ಎಂಎಟಿ, ಅಖಿಲ ಭಾರತ ಆಯುಷ್ ಸ್ನಾತಕೊತ್ತರ ಪದವಿ ಪ್ರವೇಶ ಪರೀಕ್ಷೆ, ಇಗ್ನೋ ಪಿಎಚ್ಡಿ ಪ್ರವೇಶ ಪರೀಕ್ಷೆ, ಐಸಿಎಆರ್ ಪಿಎಚ್ಡಿ, ಸ್ನಾತಕೋತ್ತರ ಪದವಿ, ಜೆಆರ್ಎಫ್/ ಎಸ್ಆರ್ಎಫ್ ಪರೀಕ್ಷಾ ದಿನಾಂಕಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ nta.ac.in ನಲ್ಲಿ ಪರೀಕ್ಷೆಯ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.