ಎಂಸಿಎ ಇನ್ನು ಎರಡು ವರ್ಷದ ಕೋರ್ಸ್​; ಎಇಸಿಟಿಇ ಆದೇಶ; ಹೇಗಿರಲಿದೆ ಪಠ್ಯಕ್ರಮ?

college students
Published on

ನವದೆಹಲಿ: ಮಾಸ್ಟರ್​ ಆಫ್​ ಕಂಪ್ಯೂಟರ್​ ಅಪ್ಲಿಕೇಷನ್​ (ಎಂಸಿಎ) ಆಕಾಂಕ್ಷಿಗಳಿಗೆ ತಾಂತ್ರಿಕ ಶಿಕ್ಷಣ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಕೋರ್ಸ್​ ಮೂರು ವರ್ಷದ ಬದಲಾಗಿ ಎರಡು ವರ್ಷದ್ದಾಗಿರಲಿದೆ.

ಕಳೆದ ವರ್ಷವೇ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ 2020-21ರ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ (ಎಇಸಿಟಿಇ) ತಿಳಿಸಿದೆ. ಆದರೆ ಈಗಾಗಲೇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮೂರು ವರ್ಷ ಇದನ್ನು ವ್ಯಾಸಂಗ ಮಾಡಬೇಕಿದೆ.

ಕಳೆದ ಹಲವು ವರ್ಷಗಳಿಂದ ಇದರ ವ್ಯಾಸಂಗ ಅವಧಿಯನ್ನು ಕಡಿತಗೊಳಿಸುವ ಬಗ್ಗೆ ಚರ್ಚೆಗಳು ನಡೆದಿದ್ದವು. ಜತೆಗೆ, ಇದರ ಜನಪ್ರಿಯತೆ ಕೂಡ ಕುಂದಿತ್ತು. ಹಲವು ಕಾಲೇಜುಗಳಲ್ಲಿ ಎಂಸಿಎ ಕೋರ್ಸ್​ ರದ್ದು ಮಾಡಲಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಕೋರ್ಸ್​ ಅವಧಿಯನ್ನು ಎರಡು ವರ್ಷಕ್ಕೆ ಇಳಿಸಲಾಗಿದೆ.

ಕೋರ್ಸ್​ ಅವಧಿಯನ್ನು ಕಡಿಮೆ ಮಾಡಿದ್ದರೂ, ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಮಂಡಳಿ ಸ್ಪಷ್ಟಪಡಿಸಿದೆ. ಏಕೆಂದರೆ, ಎಂಸಿಎಗೆ ಲ್ಯಾಟರಲ್​ ಎಂಟ್ರಿ ಕೂಡ ನೀಡಲಾಗುತ್ತದೆ. ಆ ಅಭ್ಯರ್ಥಿಗಳಿಗೆ ತೊಂದರೆಯಾಗದಿರಲು ಪಠ್ಯಕ್ರಮದಲ್ಲಿ ಬದಲಾವಣೆ ಇಲ್ಲವೆಂದು ಹೇಳಿದೆ.

ಎಂಸಿಎಗೆ ಬಿಸಿಎ, ಬಿಎಸ್ಸಿ, ಬಿಕಾಂ, ಬಿಎ ಪದವೀಧರರಿಗೂ ಅವಕಾಶವಿದೆ. ಕನಿಷ್ಠ ಶೇ.50 ಅಂಕಗಳನ್ನು ಪಡೆದಿರಬೇಕು. ಕರ್ನಾಟಕದಲ್ಲಿ ಪಿಜಿಸಿಇಟಿ ಮೂಲಕ ಎಂಸಿಎ ಸೀಟುಗಳ ಹಂಚಿಕೆ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net