More

    ವಿರುಷ್ಕಾ ದಂಪತಿಗೆ 2ನೇ ಮಗು ಸುಳ್ಳು ಮಾಹಿತಿ ಹರಡಿ ದೊಡ್ಡ ತಪ್ಪು ಮಾಡಿದೆ: ಎಬಿಡಿ

    ಮುಂಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗುಳಿದ ವಿರಾಟ್ ಕೊಹ್ಲಿ ಕುರಿತು ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಈ ಪ್ರಶ್ನೆಗಳಿಗೆ ಆರ್‌ಸಿಬಿ ಮಾಜಿ ಕ್ರಿಕೆಟಿಗ, ವಿರಾಟ್ ಕೊಹ್ಲಿ ಆಪ್ತ ಎಬಿ ಡಿವಿಲಿಯರ್ಸ್ ಲೈವ್ ಮೂಲಕ ಸ್ಪಷ್ಟನೆ ನೀಡಿದ್ದರು.

    ಇದನ್ನೂ ಓದಿ:ರೋಹಿತ್​ರನ್ನು ಕೆಳಗಿಳಿಸಿ ಹಾರ್ದಿಕ್​ಗೆ ನಾಯಕತ್ವ: ಅಸಲಿ ಕಾರಣ ತಿಳಿಸಿದ ಕೋಚ್ ಮಾರ್ಕ್ ಬೌಚರ್ !

    ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಆರ್​ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಇತ್ತೀಚೆಗೆ ಬಹಿರಂಗಪಡಿಸಿದ್ದರು. ಆದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಎಬಿ ಡಿವಿಲಿಯರ್ಸ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

    ನಾನು ನನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದಂತೆ ಕುಟುಂಬ ಮೊದಲ ಆದ್ಯತೆಯಾಗಿದೆ. ಅದೇ ಸಮಯದಲ್ಲಿ ನಾನು ದೊಡ್ಡ ತಪ್ಪೊಂದನ್ನು ಮಾಡಿದ್ದೇನೆ, ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದೆ. ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿದ್ದೇನೆ. ಇದಕ್ಕಾಗಿ ಕ್ಷಮೆ ಇರಲಿ ಎಂದು ಕೋರಿದ್ದಾರೆ.

    ಎಬಿ ಡಿವಿಲಿಯರ್ಸ್ ಹೇಳಿದ್ದೇನು..?: ಕೊಹ್ಲಿ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬಕ್ಕೆ ಸಮಯ ನೀಡುವುದು ಕೊಹ್ಲಿಗೆ ಅತ್ಯವಶ್ಯಕವಾಗಿದೆ. ಬಹುತೇಕರು ಕುಟುಂಬಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಈ ಕಾರಣಕ್ಕೆ ಕೊಹ್ಲಿಯನ್ನು ಬದ್ಧತೆ, ಕ್ರಿಕೆಟ್ ಕುರಿತು ಪ್ರಶ್ನಿಸುವುದು ಸರಿಯಲ್ಲ. ಮೈದಾನದಲ್ಲಿ ನಾವು ಕೊಹ್ಲಿಯನ್ನು ಮಿಸ್ ಮಾಡುತ್ತಿದ್ದೇವೆ. ಆದರೆ ಕೊಹ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

    ಕೊಹ್ಲಿ ಟೆಸ್ಟ್ ಪಂದ್ಯಕ್ಕೆ ಗೈರಾಗಿರುವುದಕ್ಕೆ ಕಾರಣವೇನು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಕೊಹ್ಲಿ ವಿಶ್ರಾಂತಿಗೆ ಕಾರಣ ಏನೇ ಇರಬಹುದು. ಆದರೆ ಅವರಿಗೆ ನಾನು ಶುಭ ಹಾರೈಸುತ್ತೇನೆ. ವಿಶ್ರಾಂತಿ ಬಳಿಕ ವಿರಾಟ್ ಕೊಹ್ಲಿ ಮತ್ತಷ್ಟು ಪವರ್‌ಫುಲ್ ಆಗಿ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂದು ಹೇಳುವ ಮೂಲಕ ಎಬಿ ಡಿವಿಲಿಯರ್ಸ್ ಸ್ಪಷ್ಟನೆ ಕೊಟ್ಟಿದ್ದಾರೆ.

    5 ಕೋಟಿ ಕೊಟ್ಟರೆ ಸಿನಿಮಾ ಮಾಡ್ತೀನಿ ಎಂದ ಕೊಡಗಿನ ಕುವರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts