More

    ರೋಹಿತ್​ರನ್ನು ಕೆಳಗಿಳಿಸಿ ಹಾರ್ದಿಕ್​ಗೆ ನಾಯಕತ್ವ: ಅಸಲಿ ಕಾರಣ ತಿಳಿಸಿದ ಕೋಚ್ ಮಾರ್ಕ್ ಬೌಚರ್ !

    ಮುಂಬೈ: ಐಪಿಎಲ್​ 2024ರ ಆವೃತ್ತಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆಯ ನಿರ್ಧಾರ ಕ್ರಿಕೆಟ್ ನಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿರುವುದು ಗೊತ್ತೇ ಇದೆ. ತಂಡಕ್ಕೆ ಐದು ಪ್ರಶಸ್ತಿಗಳನ್ನು ತಂದುಕೊಟ್ಟ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಿಸಿರುವುದು ಅಭಿಮಾನಿಗಳನ್ನು ಕೆರಳಿಸಿತ್ತು.

    ಇದನ್ನೂ ಓದಿ:ನಾಯಿ ತಿನ್ನಲಿಲ್ಲ ಎಂದು ಅದೇ ಬಿಸ್ಕಿಟ್​ ಕಾರ್ಯಕರ್ತನಿಗೆ ನೀಡಿದ ರಾಹುಲ್​ ಗಾಂಧಿ; ವಿಡಿಯೋ ವೈರಲ್​

    ನಿರೀಕ್ಷೆಯಂತೆಯೇ, ರೋಹಿತ್ ಅವರಿಂದ ನಾಯಕನ ಪಟ್ಟವನ್ನು ಕಿತ್ತು ಪಾಂಡ್ಯಗೆ ನೀಡಿದ್ದು ಮುಂಬೈ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಸೋಷಿಯಲ್‌ ಮೀಡಿಯಾದಲ್ಲೂ ಈ ಕುರಿತು ಸಾಕಷ್ಟು ಅಸಮಾಧಾನ ಹಾಗೂ ಆಕ್ರೋಶಗಳು ಹೊರಬಂದವು. ಹಾರ್ದಿಕ್ ಅವರನ್ನು ನಾಯಕನನ್ನಾಗಿ ಮಾಡುವ ನಿರ್ಧಾರವನ್ನು ಎಂಐ ಫ್ರಾಂಚೈಸಿ ಮೊದಲೇ ಮಾಡಿತ್ತು.

    ಗುಜರಾತ್ ಟೈಟಾನ್ಸ್ ತಂಡ ತೊರೆದು, ಪಾಂಡ್ಯ ಎಂಐಗೆ ಮರಳುವ ಹಿಂದೆ ನಾಯಕತ್ವದ ಒಪ್ಪಂದವೇ ಪ್ರಮುಖ ಕಾರಣ ಎಂಬುದಕ್ಕೆ ಹೆಚ್ಚುವರಿ ಸಾಕ್ಷಿ ಬೇಕಿಲ್ಲ. ಹೀಗಾಗಿ ಅಭಿಮಾನಿಗಳ ಅಸಮಾಧಾನವಿದ್ದರೂ, ರೋಹಿತ್‌ ಅವರನ್ನು ಮತ್ತೆ ನಾಯಕನಾಗಿ ಮಾಡಲು ಮುಂಬೈ ಫ್ರಾಂಚೈಸಿ ಮನಸು ಮಾಡಲಿಲ್ಲ. ಈ ಕುರಿತು ಮುಂಬೈ ಫ್ರಾಂಚೈಸಿ ಮೇಲೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಇತ್ತೀಚೆಗೆ, ಕೋಚ್ ಮಾರ್ಕ್ ಬೌಚರ್ ಈ ನಿರ್ಧಾರದ ಹಿಂದಿನ ನೈಜ ಕಾರಣ ಬಹಿರಂಗಪಡಿಸಿದ್ದಾರೆ.

    ರೋಹಿತ್​ರನ್ನು ಕೆಳಗಿಳಿಸಿ ಹಾರ್ದಿಕ್​ಗೆ ನಾಯಕತ್ವ: ಅಸಲಿ ಕಾರಣ ತಿಳಿಸಿದ ಕೋಚ್ ಮಾರ್ಕ್ ಬೌಚರ್ !

    ಸ್ಪೋರ್ಟ್ಸ್ ಚಾನೆಲ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಕೋಚ್ ಮಾರ್ಕ್ ಬೌಚರ್​, “ಇದು ಸಂಪೂರ್ಣವಾಗಿ ಕ್ರೀಡಾ ನಿರ್ಧಾರವಾಗಿದೆ. ನನ್ನ ಮಟ್ಟಿಗೆ, ಇದು ಕೇವಲ ಪರಿವರ್ತನೆಯ ಹಂತವಾಗಿದೆ, ಅನೇಕ ಜನರು ಭಾವನಾತ್ಮಕರಾಗಿದ್ದಾರೆ ಮತ್ತು ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ. ನಿರ್ಧಾರವು ಒಬ್ಬ ಆಟಗಾರನಾಗಿ, ಒಬ್ಬ ವ್ಯಕ್ತಿಯಾಗಿ ರೋಹಿತ್ ಅವರಿಂದ ಅತ್ಯುತ್ತಮ ಆಟವನ್ನು ಹೊರತರಲಿದೆ ಎಂದು ನಾನು ಭಾವಿಸುತ್ತೇನೆ. ಅವರು ಮೈದಾನಕ್ಕಿಳಿದು ಆಟವನ್ನು ಆನಂದಿಸಲು ಮತ್ತು ಉತ್ತಮ ರನ್‌ ಗಳಿಸಲು ಬಿಡಿ,” ಎಂದು ಮಾರ್ಕ್ ಬೌಚರ್ ಸ್ಮಾಶ್ ಸ್ಪೋರ್ಟ್ಸ್ ಪೋಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

    ರೋಹಿತ್ ಅವರಿಂದ ಕೆಲಸದ ಹೊರೆಯನ್ನು ತಗ್ಗಿಸುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಐಪಿಎಲ್‌ನಲ್ಲಿ ಕ್ರಿಕೆಟೇತರ ಜವಾಬ್ದಾರಿಗಳು ನಾಯಕತ್ವ ಬದಲಾವಣೆಗೆ ಮತ್ತೊಂದು ಕಾರಣ. ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ರೋಹಿತ್‌ ಶರ್ಮಾ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ನಾವು ಅವರ ಮೇಲಿನ ಜವಾಬ್ದಾರಿಯನ್ನು ಕಡಿಮೆ ಮಾಡಲು ನಿರ್ಧರಿಸಿದ್ದೇವೆ. ಲೀಗ್ ಟೂರ್ನಿಯಲ್ಲಿ ನಾಯಕನಿಗೆ ಆಟದ ಹೊರತಾಗಿ ಹಲವು ಜವಾಬ್ದಾರಿಗಳಿವೆ. ಫೋಟೋಶೂಟ್‌ಗಳು ಮತ್ತು ಜಾಹೀರಾತುಗಳನ್ನು ನೋಡಿಕೊಳ್ಳಬೇಕು ಇದರಿಂದ ನಾಯಕನ ಮೇಲೆ ಹೆಚ್ಚಿನ ಒತ್ತಡವಿರುತ್ತದೆ ಎಂದು ಮಾರ್ಕ್ ಹೇಳಿದರು.

    5 ಕೋಟಿ ಕೊಟ್ಟರೆ ಸಿನಿಮಾ ಮಾಡ್ತೀನಿ ಎಂದ ಕೊಡಗಿನ ಕುವರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts