ಕೆಜಿಎಫ್​, ಕಾಂತಾರ ಅಷ್ಟೇ ಅಲ್ಲಾ… ಸ್ಯಾಂಡಲ್​ವುಡ್​ಗೆ ಈ ಬಾರಿ ಬಂಪರ್ ಜಾಕ್​ಪಾಟ್​; ಇನ್ಯಾರಿಗೆ ಬಂತು ಪ್ರಶಸ್ತಿ, ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

KGF Kantara
Published on

ನವದೆಹಲಿ: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇಂದು ಘೋಷಣೆಯಾಗಿದ್ದು, ಈ ಬಾರಿಯೂ ಕೂಡ ದಕ್ಷಿಣ ಭಾರತದ ಚಿತ್ರಗಳು ಮೇಲುಗೈ ಸಾಧಿಸಿದ್ದು, ಸಾಲು ಸಾಲು ಅವಾರ್ಡ್​ಗಳನ್ನು ಗೆದ್ದುಕೊಂಡಿವೆ. ಕಾಂತಾರ ಚಿತ್ರದಲ್ಲಿನ ಅಮೋಘ ನಟನೆಗಾಗಿ ನಟ ರಿಷಭ್​ ಶೆಟ್ಟಿಗೆ ಪ್ರಶಸ್ತಿ ಒಲಿದು ಬಂದಿದ್ದು, ಮತ್ತಷ್ಟು ವಿಶೇಷವೆನಿಸಿದೆ.

ಹೊಂಬಾಳೆ ಸಂಸ್ಥೆ ನಿರ್ಮಾಣದ ಕಾಂತಾರ ಚಿತ್ರದಲ್ಲಿನ ನಟನೆಗೆ ರಿಷಭ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.  ಇದೇ ಸಿನಿಮಾಗೆ ಅತ್ಯುತ್ತಮ ಮನೋರಂಜನಾ ಚಿತ್ರ ಕೂಡ ಲಭಿಸಿದೆ. ಇನ್ನು ಕೆಜಿಎಫ್‌ 2 ಚಿತ್ರಕ್ಕೆ ಕೂಡ ಎರಡು ರಾಷ್ಟ್ರೀಯ ಪ್ರಶಸ್ತಿಗಳು ಬಂದಿದೆ.  ಅತ್ಯುತ್ತಮ ಪ್ರಾದೇಶಿಕ ಚಿತ್ರ ಮತ್ತು ಅತ್ಯುತ್ತಮ ಸಾಹಸ ವಿಭಾಗದಲ್ಲಿ ಬಂದಿದೆ.

ಕೆಜಿಎಫ್​, ಕಾಂತಾರ ಚಿತ್ರವನ್ನು ಹೊರತುಪಡಿಸಿ ಕನ್ನಡದ ಮೂರು ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿವೆ. ಅತ್ಯುತ್ತಮ ಸಂಕಲನಕ್ಕ ಪ್ರಶಸ್ತಿಗೆ ಮಧ್ಯಂತರ ಚಿತ್ರದ ಸುರೇಶ್​ ಅರಸ್​ (ಎಡಿಟರ್​) ಭಾಜನರಾಗಿದ್ದಾರೆ. ಬೆಸ್ಟ್ ಡೆಬ್ಯೂ ಫಿಲ್ಮ್ ಆಫ್ ಎ ಡೈರೆಕ್ಟರ್ ಮಧ್ಯಂತರ ಚಿತ್ರದ ನಿರ್ದೇಶಕ ಬಸ್ತಿ ದಿನೇಶ್ ಶೆಣೈ ಅವರಿಗೆ ಲಭಿಸಿದೆ. ಅತ್ಯುತ್ತಮ ಕಲೆ ಹಾಗೂ ಸಾಂಸ್ಕೃತಿಕ ಚಲನಚಿತ್ರ ಪ್ರಶಸ್ತಿ ಕನ್ನಡದ ರಂಗ ವೈಭೋಗ ಚಿತ್ರದ ಪಾಲಾಗಿದೆ. ಈ ಚಿತ್ರವನ್ನ ಸುನೀಲ್ ಪುರಾಣಿಕ್ ನಿರ್ಮಿಸಿ, ನಿರ್ದೇಶಿಸಿದ್ದಾರೆ.ಸ್ಯಾಂಡಲ್​ವುಡ್​ಗೆ ಒಟ್ಟು 7 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದ್ದು, ಬಂಪರ್​ ಎಂದೇ ಹೇಳಬಹುದಾಗಿದೆ.

National award winning films
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net