ಟ್ರೈನಿ ವೈದ್ಯೆ ಹತ್ಯೆ ಪ್ರಕರಣ; ಇದು ಬಿಜೆಪಿಯ ಟೂಲ್​ಕಿಟ್​ನ ಆಟವೆಂದ ಟಿಎಂಸಿ ಸಂಸದ

TMC MP
Published on

ಕಲ್ಕತ್ತಾ: ರಾಷ್ಟ್ರವ್ಯಾಪಿ ತೀವ್ರ ಸಂಚಲನ ಮೂಡಿಸಿರುವ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಬಿಜೆಪಿ ಹಾಗೂ ಟಿಎಂಸಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯನ್ನು ಚುರುಕುಗೊಳಿಸಿದೆ. ಇತ್ತ ಘಟನೆಗೆ ಸಂಬಂಧಿಸಿದಂತೆ ನಟ-ನಟಿಯರು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡುತ್ತಿರುವ ಬಗ್ಗೆ ಕಿಡಿಕಾರಿರುವ ಟಿಎಂಸಿ ಸಂಸದ ಇದು ಬಿಜೆಪಿಯ ಟೂಲ್​ಕಿಟ್​ ಎಂದು ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಟಿಎಂಸಿ ಸಂಸದ (ರಾಜ್ಯಸಭೆ) ಸಾಕೇತ್​ ಗೋಖಲೆ, ಬಿಜೆಪಿ ಟೂಲ್​ಕಿಟ್​ ಚಾಲ್ತಿಯಲ್ಲಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಇನ್ನೇನು ಬೇಕು, ಮಣಿಪುರ, ಬಿಲ್ಕಿಸ್​ ಬಾನೋ ಹಾಗೂ ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಒಂದು ಮಾತನ್ನು ಆಡದ ಕರೀನಾ ಕಪೂರ್​ ಈಗ ಟ್ರೈನಿವೈದ್ಯೆ ಸಾವಿನ ಕುರಿತು ಮಾತನಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಬರೆದುಕೊಂಡಿದ್ದಾರೆ.

TMC MP

ಘಟನೆಗೆ ಸಂಬಂಧಿಸಿದಂತೆ ಗುರುವಾರ (ಆಗಸ್ಟ್​ 15) ಬಾಲಿವುಡ್​ ತಾರೆಯರಾದ ಆಲಿಯಾ ಭಟ್​, ಸ್ವರಾ ಭಾಸ್ಕರ್, ವಿಜಯ್ ವರ್ಮಾ, ಹೃತಿಕ್ ರೋಷನ್, ಪರಿಣಿತಿ ಚೋಪ್ರಾ, ಆಯುಷ್ಮಾನ್ ಖುರಾನಾ, ಕಂಗನಾ ರನೌತ್, ಕರೀನಾ ಕಪೂರ್ ಖಾನ್ ಮತ್ತು ಪ್ರೀತಿ ಜಿಂಟಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿ ಕಿಡಿಕಾರಿದ್ದರು.

ಘಟನೆಗೆ ಸಂಬಂಧಿಸಿದಂತೆ ನಟಿ ಕರೀನಾ ಕಪೂರ್​ ಖಾನ್​ ಅವರು 12 ವರ್ಷಗಳ ನಂತರ ಅದೇ ಕಥೆ, ಅದೇ ಪ್ರತಿಭಟನೆ. ಆದರೆ ನಾವು ಇನ್ನೂ ಬದಲಾವಣೆಗಾಗಿ ಕಾಯುತ್ತಿದ್ದೇವೆ ಪೋಸ್ಟ್​ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದ ಸಾಕೇತ್​ ಗೋಖಲೆ ಇದು ಬಿಜೆಪಿಯ ಟೂಲ್​ಕಿಟ್​ ಎಂದು ಆರೋಪಿಸಿ ಟ್ವೀಟ್​ ಮಾಡಿ ಡಿಲೀಟ್​ ಮಾಡಿದ್ದರರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net