ಹರಿಯಾಣ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್​; ಅಕ್ಟೋಬರ್ 1ಕ್ಕೆ ಮತದಾನ, 4ಕ್ಕೆ ಎಣಿಕೆ

eci voting
Published on

ನವದೆಹಲಿ: ರಾಷ್ಟ್ರೀಯ ಚುನಾವಣಾ ಆಯೋಗವು ಇಂದು (ಆಗಸ್ಟ್​ 16) ಹರಿಯಾಣ ರಾಜ್ಯ ವಿಧಾನಸಭೆಗೆ ಎಲೆಕ್ಷನ್​ ಡೇಟ್​ ಘೋಷಣೆ ಮಾಡಿದೆ. ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್, ಜ್ಞಾನೇಶ್ ಕುಮಾರ್ ಮತ್ತು ಡಾ. ಸಂಧು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಿನಾಂಕವನವ್ನು ಘೋಷಿಸಿದ್ದಾರೆ.

90 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಹರಿಯಾಣ ಅಸ್ಲೆಂಬಿಗೆ ಅಕ್ಟೋಬರ್​ 01ರಂದು ಮತದಾನ ನಡೆಯಲಿದ್ದು, ಅಕ್ಟೋಬರ್​ 04ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. 90 ಸ್ಥಾನಗಳ ಪೈಕಿ 73 (ಸಾಮಾನ್ಯ), 17 (ಪರಿಶಿಷ್ಟ ಜಾತಿ)ಅಭ್ಯರ್ಥಿಗಳಿಗೆ ಮೀಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಹರಿಯಾಣದಲ್ಲಿ 2.01 ಕೋಟಿ ನೋಂದಾಯಿತ ಮತದಾರರಿದ್ದು, 1.06 ಕೋಟಿ ಪುರುಷ ಮತದಾರರು ಮತ್ತು 95 ಲಕ್ಷ ಮಹಿಳಾ ಮತದಾರರಿದ್ದಾರೆ. ಹರಿಯಾಣದಲ್ಲಿ, ವಿಧಾನಸಭೆಯ ಅವಧಿಯು 2024ರ ನವೆಂಬರ್​ 03ಕ್ಕೆ ಅಂತ್ಯವಾಗಲಿದೆ. ಚುನಾವಣಾ ಆಯೋಗವು, ಚುನಾವಣಾ ಸಿದ್ಧತೆಯ ಮೇಲ್ವಿಚಾರಣೆ ಸಲುವಾಗಿ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net