

ಬೆಂಗಳೂರು: ಹೊಸ ವರ್ಷ ಹಾಗೂ ಕ್ರಿಸ್‌ಮಸ್ ಸಂದರ್ಭದಲ್ಲಿ ನೀಡಲಾಗುತ್ತಿದ್ದ ಸಾಂದರ್ಭಿಕ (ಒಂದು ದಿನಕ್ಕೆ ಸೀಮಿತ) ಪರವಾನಗಿಯನ್ನು ಈ ಬಾರಿ ನಿಲ್ಲಿಸಲಾಗಿದೆ.
ಕರೊನಾ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯು ಈ ಕ್ರಮ ತೆಗೆದುಕೊಂಡಿದೆ. ಪ್ರತಿ ವರ್ಷ ರಾಜ್ಯಾದ್ಯಂತ ಅಂದಾಜು 500-600 ಅರ್ಜಿಗಳು ಸಲ್ಲಿಕೆಯಾಗುತ್ತಿತ್ತು. ಇದರಿಂದ 5-6 ಕೋಟಿ ರೂ.ಆದಾಯ ಬರುತ್ತಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಮಾಡುವುದಕ್ಕೆ ಸಾಂದರ್ಭಿಕ ಪರವಾನಗಿ ನೀಡುವುದನ್ನು ಸದ್ಯ ನಿಲ್ಲಿಸಲಾಗಿದೆ.
ಹೊಸ ವರ್ಷ ಸಂದರ್ಭದಲ್ಲಿ ಹೆಚ್ಚಿನ ಮದ್ಯವಹಿವಾಟು ನಡೆಯುತ್ತಿತ್ತು. ಇದನ್ನು ಮನಗಂಡು ಕೆಲವರು ಇಲಾಖೆಯು ನೀಡುತ್ತಿದ್ದ ಸಾಂದರ್ಭಿಕ ಪರವಾನಗಿ ಪಡೆದು ಮದ್ಯ ಮಾರಾಟ ಮಾಡುತ್ತಿದ್ದರು.