More

    ಮಟನ್ ಬಡಿಸದೇ ಅವಮಾನ ಮಾಡಿದ್ದಾರೆ ಅಂತ ಮದುವೆ ರದ್ದು ಮಾಡಿದ ವರನ ಕಡೆಯವರು!​

    ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಚಿತ್ರ-ವಿಚಿತ್ರ ಕಾರಣಗಳಿಗೆ ಮದುವೆಗಳು ಮುರಿಯುತ್ತಿರುವುದು ವರದಿಯಾಗುತ್ತಿದೆ. ಇದೀಗ ಆ ಸಾಲಿಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು, ಮಟನ್​ ಬೋನ್​ ಮ್ಯಾರೋ ಐಟಂ ಮಾಡಿಸಲಿಲ್ಲ ಅಂತ ವರನ ಕಡೆಯವರು ಮದುವೆ ಮುರಿದುಕೊಂಡಿರುವ ಪ್ರಸಂಗ ತೆಲಂಗಾಣದಲ್ಲಿ ನಡೆದಿದೆ.

    ನಿಜಾಮಾಬಾದ್‌ ಮೂಲದ ವಧು ಮತ್ತು ಜಗತಿಯಾಲ್‌ ಮೂಲದ ವರನ ನಡುವೆ ಕಳೆದ ನವೆಂಬರ್‌ನಲ್ಲಿ ವಧುವಿನ ನಿವಾಸದಲ್ಲಿ ನಿಶ್ಚಿತಾರ್ಥ ನೇರವೇರಿತ್ತು. ಈ ವೇಳೆ ಊಟದ ಮೆನು ವಿಚಾರದಲ್ಲಿ ಎರಡೂ ಕುಟುಂಬಗಳ ನಡುವೆ ಉಂಟಾದ ಮನಸ್ತಾಪಕ್ಕೆ ನಿಶ್ಚಿತಾರ್ಥದಂದೇ ಮದುವೆ ಮುರಿದುಬಿದ್ದಿದೆ.

    ವಧುವಿನ ಮನೆಯವರು ತಮ್ಮ ಕುಟುಂಬದ ಸದಸ್ಯರು ಮತ್ತು ವರನ ಸಂಬಂಧಿಕರು ಸೇರಿದಂತೆ ಅತಿಥಿಗಳಿಗೆ ಮಾಂಸಾಹಾರಿ ಮೆನುವನ್ನು ನಿರ್ಧರಿಸಿದ್ದರು. ಆದರೆ, ನಾವು ಹೇಳಿದಂತೆ ಮಟನ್ ಬೋನ್​ ಮ್ಯಾರೋವನ್ನು ಬಡಿಸಲಿಲ್ಲ ಅಂತ ಆಕ್ರೋಶಗೊಂಡ ವರನ ಕಡೆಯವರು ಜಗಳ ಮಾಡಿ ಮದುವೆಯನ್ನೇ ರದ್ದು ಮಾಡಿದ್ದಾರೆ. ನಾವು ಊಟದ ಮೆನುವಿನಲ್ಲಿ ಮಟನ್​ ಬೋನ್​ ಮ್ಯಾರೋ ಸೇರಿಸಲಿಲ್ಲ ಎಂದು ಸ್ಪಷ್ಟನೆ ನೀಡಲು ಪ್ರಯತ್ನಿಸಿದರೂ ವರನ ಕಡೆಯವರು ಒಪ್ಪದೆ ಅಲ್ಲಿಂದ ಹೊರ ನಡೆದರು.

    ಈ ವಿವಾದ ಕೊನೆಗೆ ಪೊಲೀಸ್​ ಠಾಣೆಯ ಮೆಟ್ಟಿಲು ಸಹ ಏರಿತು. ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ವರನ ಕಡೆಯವರ ಮನವೊಲಿಸಲು ಪ್ರಯತ್ನಿಸಿದರು, ಆದರೆ ವಧುವಿನ ಕುಟುಂಬವು ಮಟನ್​ ಬೋನ್​ ಮ್ಯಾರೋ ಬಡಿಸದೆ ಅವಮಾನಿಸಿದ್ದಾರೆ ಎಂದರು. ಅಲ್ಲದೆ, ಊಟದ ಮೆನುವಿನಲ್ಲಿ ಮಟನ್​ ಮೂಳೆ ಸೇರಿಸದಿರುವ ಬಗ್ಗೆ ವಧುವಿನ ಕಡೆಯವರು ನಮಗೆ ಮೊದಲೇ ತಿಳಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿ, ಮದುವೆ ಮಾಡಿಕೊಳ್ಳಲು ಒಪ್ಪಲೇ ಇಲ್ಲ. ಅಂತಿಮವಾಗಿ ಎರಡೂ ಕುಟುಂಬದವರು ಮದುವೆಯನ್ನು ಮುರಿದುಕೊಂಡರು. (ಏಜೆನ್ಸೀಸ್​)

    ವಿವಾದ ವಿಕಾಸದ ದಾರಿ; ಸಭ್ಯತೆಯ ಚೌಕಟ್ಟು ಮೀರಿದ ಟೀಕೆಗಳು

    ಈ ಆಹಾರಗಳನ್ನು ನಿಯಮಿತವಾಗಿ ಸೇವಿಸಿ, ಒತ್ತಡಕ್ಕೆ ಹೇಳಿ ಗುಡ್​ಬೈ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts