More

    ಈ ಆಹಾರಗಳನ್ನು ನಿಯಮಿತವಾಗಿ ಸೇವಿಸಿ, ಒತ್ತಡಕ್ಕೆ ಹೇಳಿ ಗುಡ್​ಬೈ!

    ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒತ್ತಡವೂ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಓಡುತ್ತಿರುವ ಕಾಲದ ಜತೆ ಹೊಂದಿಕೊಳ್ಳಲು ಪರದಾಡುವ ಮಂದಿ ಈ ಒತ್ತಡದ ಬಲೆಗೆ ಸುಲಭವಾಗಿ ಸಿಕ್ಕಿ ಬೀಳುತ್ತಾರೆ. ಅಷ್ಟಕ್ಕೂ ಈ ಒತ್ತಡ ಹೇಗೆ ಉಂಟಾಗುತ್ತದೆ? ನಮ್ಮ ದೇಹದಲ್ಲಿ ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ಹಾರ್ಮೋನ್ ಬಿಡುಗಡೆಯಾಗುವುದರಿಂದ ಒತ್ತಡ ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

    ಒತ್ತಡವು ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳು ಮಾಡುತ್ತದೆ. ಹೀಗಾಗಿ ಇದರ ಬಗ್ಗೆ ತುಂಬಾ ಕಾಳಜಿ ವಹಿಸಬೇಕು. ಹಾಗಾದರೆ ಒತ್ತಡದಿಂದ ಹೇಗೆ ಹೊರ ಬರುವುದು? ಕೆಲವೊಂದು ಆಹಾರಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಒತ್ತಡದಿಂದ ಹೊರಬಂದು ಆರೋಗ್ಯವಾಗಿರಬಹುದು. ಹಾಗಾದರೆ ಆ ಆಹಾರಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

    ಕಿತ್ತಳೆ ಹಣ್ಣು: ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಕಾರ್ಟಿಸೋಲ್ ಹಾರ್ಮೋನ್ ಪರಿಣಾಮವನ್ನು ಸಹ ಕಡಿಮೆ ಮಾಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ.

    ಹಾಲು: ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿದರೆ ತುಂಬಾ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ಹಾಲಿನಲ್ಲಿ B2, B12 ಜೀವಸತ್ವಗಳು ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ಹಾಲು ಸೇವನೆಯಿಂದ ಒತ್ತಡವನ್ನು ಕಡಿಮೆ ಮಾಡಬಹುದು ಮತ್ತು ಮನಸ್ಸು ಶಾಂತವಾಗಿರಿಸಬಹುದು.

    ಬಾದಾಮಿ: ಒಣ ಹಣ್ಣುಗಳು ಅಥವಾ ಡ್ರೈಫ್ರೂಟ್​ಗಳು ಪೋಷಕಾಂಶಗಳ ಆಗರವಾಗಿದೆ. ಡ್ರೈಫ್ರೂಟ್​ಗಳಲ್ಲಿ ಬಾದಾಮಿಯೂ ಒಂದು. ದೇಹದಲ್ಲಿ ಸಿರೊಟೋನಿನ್ ಉತ್ಪಾದನೆಗೆ ಇದು ಸಹಾಯ ಮಾಡುತ್ತದೆ ಮತ್ತು ಒತ್ತಡದಿಂದ ಉಂಟಾಗುವ ಸಮಸ್ಯೆಯಿಂದ ರಕ್ಷಣೆ ನೀಡುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

    ಮೀನು: ಮೀನುಗಳು ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ, ಇದು ಒತ್ತಡವನ್ನು ಉಂಟುಮಾಡುವ ಕಾರ್ಟಿಸೋಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

    ಟೀ: ಗ್ರೀನ್ ಟೀ ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ. ಹಸಿರು ಚಹಾವು ಎಲ್-ಥಿಯಾನೈನ್ ಎಂದು ಕರೆಯಲ್ಪಡುವ ಅಮೈನೋ ಆಮ್ಲವನ್ನು ಹೊಂದಿರುತ್ತದೆ. ಈ ಅಮೈನೋ ಆಮ್ಲವು ಅರಿವು, ಮನಸ್ಥಿತಿ ಮತ್ತು ಶಾಂತತೆಯ ಭಾವನೆಗಳನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಗ್ರೀನ್​ ಟೀನಲ್ಲಿ ಕೆಫೀನ್ ಅಂಶ ಸಹ ಇರುತ್ತದೆ. ಕೆಲವು ವ್ಯಕ್ತಿಗಳಲ್ಲಿ ಕೆಫೀನ್ ಅಂಶವು ಒತ್ತಡದ ಭಾವನೆಗಳನ್ನು ಉಲ್ಬಣಗೊಳಿಸಬಹುದು.

    ಡಾರ್ಕ್ ಚಾಕೊಲೇಟ್​: ಕೆಲವು ರೀತಿಯ ಡಾರ್ಕ್ ಚಾಕೊಲೇಟ್​ಗಳು ಕೂಡ ಹೆಚ್ಚಿನ ಮಟ್ಟದ ಒತ್ತಡವನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಕೋಕೋ, ಫ್ಲಾವನಾಲ್ಸ್ ಎಂದು ಕರೆಯಲ್ಪಡುವ ಸಸ್ಯ-ಆಧಾರಿತ ಸಂಯುಕ್ತಗಳನ್ನು ಹೊಂದಿರುತ್ತದೆ. ಈ ಸಂಯುಕ್ತಗಳು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಫ್ಲಾವನಾಲ್​ ಅಂಶಗಳನ್ನು ಆಹಾರಗಳೆಂದರೆ, ಬೆರ್ರೀಸ್​, ಸೇಬು ಮತ್ತು ದ್ರಾಕ್ಷಿಗಳು. ಇವುಗಳ ನಿಯಮಿತ ಸೇವನೆಯು ಸಹ ಒತ್ತಡವನ್ನು ನಿವಾರಿಸುತ್ತದೆ.

    ಒತ್ತಡವನ್ನು ನಿವಾರಿಸಲು ಇತರ ಸಲಹೆಗಳು
    ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸುವುದರ ಜೊತೆಗೆ, ದೈನಂದಿನ ಜೀವನದಲ್ಲಿ ಒತ್ತಡವನ್ನು ನಿವಾರಿಸಲು ಹಲವು ಮಾರ್ಗಗಳಿವೆ. ಅವುಗಳು ಈ ಕೆಳಕಂಡಂತಿವೆ.
    * ಸ್ನೇಹಿತರು ಮತ್ತು ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವುದು
    * ಹೊರಗಡೆ ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವುದು
    * ವ್ಯಾಯಾಮಕ್ಕೆ ಸಮಯವನ್ನು ಮೀಸಲಿಡುವುದು
    * ಸಂಗೀತ ಕೇಳುವುದು
    * ಅಗತ್ಯವಾದಷ್ಟು ನಿದ್ರೆ ಮಾಡುವುದು
    * ಮದ್ಯಪಾನವನ್ನು ತಪ್ಪಿಸುವುದು

    ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗೆ, ಆರೋಗ್ಯವಾಗಿಡುವ ಸೂಪರ್​ಫುಡ್​ಗಳಿವು! ತಪ್ಪದೆ ನಿತ್ಯವು ಸೇವಿಸಿ…

    ಚಳಿಗಾಲದಲ್ಲಿ ಬ್ರೈನ್​ ಸ್ಟ್ರೋಕ್​ ಅಪಾಯ ಹೆಚ್ಚು: ತಡೆಗಟ್ಟುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts