More

    ಚಳಿಗಾಲದಲ್ಲಿ ಬ್ರೈನ್​ ಸ್ಟ್ರೋಕ್​ ಅಪಾಯ ಹೆಚ್ಚು: ತಡೆಗಟ್ಟುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ…

    ಹವಾಮಾನ ಬದಲಾದಂತೆ ನಮ್ಮ ದೇಹದಲ್ಲೂ ಅನೇಕ ಏರಿಳಿತಗಳು ಸಂಭವಿಸುತ್ತವೆ. ಹೀಗಾಗಿ ಆಯಾ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ತುಂಬಾ ಅಗತ್ಯವಾಗಿರುತ್ತದೆ. ಅದಕ್ಕಾಗಿ ನಮ್ಮ ಆರೋಗ್ಯದ ಮೇಲೆ ತುಂಬಾ ಎಚ್ಚರಿಕೆ ವಹಿಸಬೇಕು. ಸದ್ಯ ದೇಶದಲ್ಲಿ ಚಳಿಗಾಲ ಆರಂಭವಾಗಿದೆ. ಕೊರೆಯುವ ಚಳಿಯು ನಾನಾ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅದರಲ್ಲಿ ಬ್ರೈನ್​ ಸ್ಟ್ರೋಕ್​ ಕೂಡ ಒಂದು.

    ಮೆದುಳಿಗೆ ರಕ್ತದ ಹರಿವು ಅಡ್ಡಿಯಾದಾಗ ಮೆದುಳಿನಲ್ಲಿನ ಬ್ಲಾಕ್ಡ್​ ವಿಜಲ್​ (ಇಸ್ಕೆಮಿಕ್ ಸ್ಟ್ರೋಕ್) ಅಥವಾ ಮೆದುಳಿನಲ್ಲಿನ ನಾಳದ ಸ್ಫೋಟದಿಂದ (ಹೆಮರಾಜಿಕ್ ಸ್ಟ್ರೋಕ್) ಸ್ಟ್ರೋಕ್ ಸಂಭವಿಸುತ್ತದೆ. ರೋಗಿಯು ಒಮ್ಮೆ ಪಾರ್ಶ್ವವಾಯು ಅಥವಾ ಸ್ಟ್ರೋಕ್​ಗೆ ಒಳಗಾದರೆ ಮತ್ತೆ ಮತ್ತೆ ಒಳಗಾಗುವ ಸಾಧ್ಯತೆ ಇರುತ್ತದೆ.

    ಚಳಿಗಾಲದಲ್ಲಿ ಸ್ಟ್ರೋಕ್​ ಏಕೆ ಸಂಭವಿಸುತ್ತದೆ?
    ಚಳಿಗಾಲದಲ್ಲಿ ಇಸ್ಕೆಮಿಕ್ ಸ್ಟ್ರೋಕ್ ಸಾಧ್ಯತೆ ಹೆಚ್ಚಾಗಿರುತ್ತದೆ. ವಿಶೇಷವಾಗಿ ಶೀತ ಅವಧಿಯಲ್ಲಿ ದೇಹದ ತಾಪಮಾನವು ತೀವ್ರವಾಗಿ ಕುಸಿಯುತ್ತದೆ. ಶೀತ ವಾತಾವರಣದಲ್ಲಿ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದು ಮೆದುಳಿನ ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ, ಸ್ಟ್ರೋಕ್ ಎದುರಿಸಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ತುಂಬಾ ಮುಖ್ಯವಾಗಿದೆ.

    ಚಳಿಗಾಲದಲ್ಲಿ ಮೆದುಳಿನ ಪಾರ್ಶ್ವವಾಯು ಅಥವಾ ಸ್ಟ್ರೋಕ್​ ಅಪಾಯವನ್ನು ನಿಯಂತ್ರಿಸುವ ವಿವಿಧ ವಿಧಾನಗಳು ಈ ಕೆಳಕಂಡಂತಿವೆ…
    * ಬದಲಾಗುತ್ತಿರುವ ಹವಾಮಾನದ ಸಮಯದಲ್ಲಿ ರಕ್ತದೊತ್ತಡವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು.
    * ತೀವ್ರ ಚಳಿಯಂತಹ ವಾತಾವರಣಕ್ಕೆ ದಿಢೀರನೇ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು.
    * ನಿಯಮಿತವಾಗಿ ದೈಹಿಕ ಚಟುವಟಿಕೆ ಮಾಡುಬೇಕು.
    * ಆಹಾರ ಕ್ರಮದಲ್ಲಿ ಹಠಾತ್ ಬದಲಾವಣೆಗಳನ್ನು ತಪ್ಪಿಸಬೇಕು.
    * ಒತ್ತಡವನ್ನು ತಪ್ಪಿಸಬೇಕು.
    * ಅನಾರೋಗ್ಯಕರ ಆಹಾರ ಸೇವನೆ ಮತ್ತು ಅತಿಯಾಗಿ ಮದ್ಯ ಕುಡಿಯುವುದನ್ನು ತಪ್ಪಿಸಬೇಕು.
    * ಸಿಗರೇಟ್ ಅಥವಾ ಬೀಡಿ ಸೇರಿದಂತೆ ಎಲ್ಲ ರೂಪದ ತಂಬಾಕನ್ನು ತಪ್ಪಿಸಬೇಕು.
    * ನಿಮ್ಮ ವೈದ್ಯರ ಶಿಫಾರಸಿನ ಮೇರೆಗೆ ಉಪ್ಪು ಸೇವನೆಯನ್ನು ದಿನಕ್ಕೆ 5 ಗ್ರಾಂ ಅಥವಾ ದಿನಕ್ಕೆ ಒಂದು ಟೀ ಚಮಚಕ್ಕೆ ಕಡಿಮೆ ಮಾಡಬೇಕು. ಈ ರೀತಿ ಮಾಡುವುದರಿಂದ ಪಾರ್ಶ್ವವಾಯುವನ್ನು ತಡೆಗಟ್ಟುತ್ತದೆ.

    ಚಳಿ ಮೆದುಳಿಗೆ ಹಾನಿ ಮಾಡುತ್ತದೆಯೇ?
    ಲಘೂಷ್ಣತೆ, ತೀವ್ರ ಚಳಿ ಅಥವಾ ಶೀತ ಹವಾಮಾನದ ಅತ್ಯಂತ ಗಂಭೀರ ತೊಡಕುಗಳು ಮಿದುಳಿನ ಹಾನಿ ಮತ್ತು ನಂತರದ ಸಾವಿಗೆ ಕಾರಣವಾಗಬಹುದು. ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. (ಏಜೆನ್ಸೀಸ್​)

    ಪತ್ನಿ ಸ್ಪಂದನಾ ಒಡವೆ, ಬಟ್ಟೆಗಳನ್ನು ಬೇರೆಯವರಿಗೆ ಕೊಟ್ಟುಬಿಟ್ರಾ? ವಿಜಯ್​ ರಾಘವೇಂದ್ರ ಭಾವುಕ ಮಾತು

    ತಮ್ಮನ ಹೆಂಡತಿಯನ್ನು ಭೀಕರವಾಗಿ ಕೊಂದ ಕಿರಾತಕ! ಕೊಲೆ ಹಿಂದಿನ ಕಾರಣ ಕೇಳಿ ಸಂಬಂಧಿಕರು ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts