

ಬೆಂಗಳೂರು: ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿ ಭಾರತೀಯ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ. ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಹುಟ್ಟುಹಬ್ಬದ ಅಂಗವಾಗಿ ಪ್ರತಿ ವರ್ಷ ಆಗಸ್ಟ್ 29 ರಂದು ಕ್ರೀಡಾ ದಿನಾಚರಣೆ ಆಚರಿಸಲಾಗುತ್ತದೆ. ಹಾಲಿ ವರ್ಷದಲ್ಲಿ ಉತ್ತಮ ನಿರ್ವಹಣೆ ತೋರುವ ಒಬ್ಬ ಕ್ರೀಡಾಪಟುವಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿಷ್ಠಿತ ಪ್ರಶಸ್ತಿಗೆ ದಿಗ್ಗಜ ಆಟಗಾರರು ವೃತ್ತಿಜೀವನದ ವೇಳೆ ಉತ್ತಮ ನಿರ್ವಹಣೆ ನಡುವೆಯೂ ವಂಚಿತರಾಗಿದ್ದರು.ದಿಗ್ಗಜರಾದ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್‌ರಂಥ ದಿಗ್ಗಜರಿಗೆ ಈ ಪ್ರಶಸ್ತಿ ಒಲಿಯಲೇ ಇಲ್ಲ. ಈ ವರ್ಷ ಕ್ರಿಕೆಟ್‌ನಿಂದ ರೋಹಿತ್ ಶರ್ಮ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿದೆ.
ಇದನ್ನೂ ಓದಿ:ಯುವರಾಜ್ ಸಿಂಗ್ ವಿರುದ್ಧ ಪೊಲೀಸ್ ಕೇಸ್!
ಇದನ್ನೂ ಓದಿ: VIDEO|ಶೇನ್ ವಾರ್ನ್ ಶತಮಾನದ ಎಸೆತಕ್ಕೆ 27 ವರ್ಷ
ಕ್ರಿಕೆಟ್ ವಿಭಾಗದಿಂದ ಕೇವಲ ಈ ಮೂರು ದಿಗ್ಗಜರಿಗೆ ಪ್ರಶಸ್ತಿ ಕೈತಪ್ಪಿದೆ ಎಂದು ಹೇಳಲಾಗದು. ಕನ್ನಡಿಗ ಅನಿಲ್ ಕುಂಬ್ಳೆ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಅವರುಗಳ ಸಾಧನೆ ಮೇರೆಗೆ ಎಲ್ಲರೂ ಪ್ರಶಸ್ತಿ ಆರ್ಹರೆ. 1991-92ರಲ್ಲಿ ಆರಂಭಗೊಂಡ ಈ ಪ್ರಶಸ್ತಿಯನ್ನು ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್‌ಗೆ ಮೊದಲ ಪ್ರಶಸ್ತಿ ನೀಡಲಾಯಿತು. 1997-98ರಲ್ಲಿ ಸಚಿನ್ ತೆಂಡುಲ್ಕರ್, 2007ರಲ್ಲಿ ಎಂಎಸ್ ಧೋನಿ ಹಾಗೂ 2018ರಲ್ಲಿ ವಿರಾ ಕೊಹ್ಲಿಗೆ ನೀಡಲಾಗಿದೆ.