

ಬೆಂಗಳೂರು: ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಳೆದ ಭಾನುವಾರವಷ್ಟೇ ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ ಗರ್ಭಿಣಿಯಾಗಿರುವ ವಿಷಯವನ್ನು ಬಹಿರಂಗಪಡಿಸಿದ್ದರು. ಮದುವೆಗೂ ಮುಂಚೆಯೇ ಪಾಂಡ್ಯ ಅಪ್ಪನಾಗುತ್ತಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಆಪ್ತರ ಎದುರು ಗುಟ್ಟಾಗಿ ಮದುವೆ ಕಾರ್ಯವನ್ನು ಮುಗಿಸಿದ್ದರೂ ಪಾಂಡ್ಯ. ಆದರೆ, ನತಾಶಾ ಜತೆಗಿನ ನಿಶ್ಚಿತಾರ್ಥದ ವಿಷಯವನ್ನು ಹಾರ್ದಿಕ್ ಪಾಂಡ್ಯ ತಮ್ಮ ಪಾಲಕರೊಂದಿಗೆ ಮುಚ್ಚಿಟ್ಟಿದ್ದ ವಿಷಯ ಬೆಳಕಿಗೆ ಬಂದಿದೆ. ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಜತೆ ಕ್ರಿಸ್‌ಬಜ್‌ಗಾಗಿ ನಡೆಸಿದ ಮಾತುಕತೆಯಲ್ಲಿ ಹಾರ್ದಿಕ್ ಪಾಂಡ್ಯ ಈ ವಿಷಯ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: VIDEO|ಶೇನ್ ವಾರ್ನ್ ಶತಮಾನದ ಎಸೆತಕ್ಕೆ 27 ವರ್ಷ
ಮಕ್ಕಳ ಮದುವೆ ಮಾಡುವುದು ಎಂದರೆ ಪ್ರತಿಯೊಬ್ಬ ಪಾಲಕರಿಗೆ ಎಲ್ಲಿಲದ ಸಂಭ್ರಮ. ಆದರೆ, ಹಾರ್ದಿಕ್ ಪಾಂಡ್ಯ ಮಾತ್ರ ತಮ್ಮ ನಿಶ್ಚಿತಾರ್ಥದ ವಿಷಯವನ್ನು ಪಾಲಕರಿಗೆ ಹೇಳಿರಲಿಲ್ಲವಂತೆ. ‘ತಂದೆ ಮತ್ತು ತಾಯಿಗೆ ನಿಶ್ಚಿತಾರ್ಥದ ವಿಷಯ ಗೊತ್ತಿರಲಿಲ್ಲ. ನಿಶ್ಚಿತಾರ್ಥಕ್ಕೆ ಎರಡು ದಿನ ಇರುವಾಗ ಕೃನಾಲ್‌ಗೆ ಗೊತ್ತಾಯಿತು. ಅಂದುಕೊಂಡಷ್ಟು ಜೀವನದಲ್ಲಿ ಸಿಕ್ಕಿದೆ’ ಎಂದು ಪಾಂಡ್ಯ ಹೇಳಿದ್ದಾರೆ. ನಾನೀಗ ಉತ್ತಮ ಮನುಷ್ಯನಾಗುತ್ತಿದ್ದೇನೆ, ನಾನು ನನ್ನನ್ನು ಮೀರಿ ಹೋಗಲು ಪ್ರಯತ್ನಿಸುತ್ತೇನೆ. ಇದಕ್ಕಾಗಿ ಒಬ್ಬರಿಗೆ ಆದ್ಯತೆ ನೀಡುತ್ತಿದ್ದೇನೆ’ ಎಂದು ಹಾರ್ದಿಕ್ ಹೇಳಿದ್ದಾರೆ. ನಾನು ಮೊದಲ ಬಾರಿಗೆ ನತಾಶಾ ಅವರನ್ನು ಭೇಟಿಯಾದಾಗ ಅವರು ಯಾರೆಂದು ಗೊತ್ತಿರಲಿಲ್ಲ. ಆಕೆಗೂ ನಾನು ಯಾರು ಎಂದು ಗೊತ್ತಿರಲಿಲ್ಲ. ಕೇವಲ ಮಾತುಕತೆ ಮೂಲಕವೇ ಆಕೆ ನನಗೆ ಸಿಕ್ಕಿದಳು’ ಎಂದು ಹಾರ್ದಿಕ್ ಹೇಳಿದ್ದಾರೆ.
ಇದನ್ನೂ ಓದಿ:ಆತ್ಮಹತ್ಯೆಗೆ ಮುಂದಾಗಿದ್ದರು ರಾಬಿನ್ ಉತ್ತಪ್ಪ!
ಭಾನುವಾರವಷ್ಟೇ ನತಾಶಾ ಗರ್ಭಿಣಿಯಾಗಿರುವ ವಿಷಯ ಹೇಳಿಕೊಂಡಿದ್ದ ಪಾಂಡ್ಯ, ಬಳಿಕ ಕುಟುಂಬ ಸದಸ್ಯರ ಎದುರು ಪತ್ನಿಗೆ ಸೀಮಂತ ಶಾಸ ನೆರವೇರಿಸಿದ್ದರು. ಜನವರಿ 1 ಎಂದು ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಹಡಗಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.