ಮೊಹಮ್ಮದ್ ಸಿರಾಜ್ ಗುಟ್ಟು ಬಹಿರಂಗಪಡಿಸಿದ ಸಹೋದರ ಇಸ್ಮಾಯಿಲ್! | Mohammed Siraj

Mohammed Siraj
Published on

Mohammed Siraj: ಓವಲ್​ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಅಂತಿಮ ಟೆಸ್ಟ್​ ಪಂದ್ಯದ ಗೆಲುವಿನ ರುವಾರಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್​ರ ಫಿಟ್‌ನೆಸ್ ಗುಟ್ಟನ್ನು, ಅವರ ಸಹೋದರ ಮೊಹಮ್ಮದ್ ಇಸ್ಮಾಯಿಲ್ ಬಹಿರಂಗಪಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಬೌಲಿಂಗ್​ ಮೂಲಕ ಭಾರತ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಿರಾಜ್ ಅವರ ಶಿಸ್ತಿನ ದಿನಚರಿ ಮತ್ತು ಕಟ್ಟುನಿಟ್ಟಿನ ಆಹಾರಕ್ರಮದ ಬಗ್ಗೆ ಬೆಳಕು ಚೆಲ್ಲಿರುವ ಇಸ್ಮಾಯಿಲ್, ಸಿರಾಜ್ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ, ಪಿಜ್ಜಾ ಸೇರಿದಂತೆ ಇನ್ನಿತರ ಫಾಸ್ಟ್ ಫುಡ್​ ಸೇವನೆಯಿಂದ ದೂರವಿದ್ದಾರೆ ಎಂದರು.

2025 ರ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ತಂಡಕ್ಕೆ ಸಿರಾಜ್ ಆಯ್ಕೆಯಾಗದಿರುವ ಬಗ್ಗೆ ಮಾತಾಡಿದ ಸಿರಾಜ್​ ಸಹೋದರ, ಚಾಂಪಿಯನ್ಸ್ ಟ್ರೋಫಿಗೆ ಸಿರಾಜ್ ಆಯ್ಕೆಯಾಗದಿದ್ದರು, ಅವರು ತಮ್ಮ ಪ್ರಯತ್ನಗಳಿಂದ ದೂರ ಉಳಿಯದೇ ತಮ್ಮ ಫಿಟ್‌ನೆಸ್‌ನತ್ತ ಗಮನಹರಿಸಿದರು, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕಠಿಣ ಅಭ್ಯಾಸ ನಡೆಸಿದರು. ತಮ್ಮ ದೌರ್ಬಲ್ಯಗಳತ್ತ ಗಮನ ನೀಡಿ ಅದನ್ನು ಸರಿಪಡಿಸಿಕೊಂಡಿರುವ ಬಗ್ಗೆ ತಿಳಿಸಿದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಿರಾಜ್ ಐದು ಪಂದ್ಯಗಳಿಂದ (ಒಂಬತ್ತು ಇನ್ನಿಂಗ್ಸ್‌ಗಳು) 32.43 ಸರಾಸರಿಯಲ್ಲಿ 23 ವಿಕೆಟ್‌ಗಳನ್ನು ಪಡೆದಿದ್ದು, ಅಂತಿಮ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇತ್ತೀಚೆಗೆ ನಡೆದ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದ ಸಿರಾಜ್, ಮತ್ತೆ ಏಕದಿನ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ.(ಏಜೆನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net