

Shashi Tharoor: ಓವಲ್ ಮೈದಾನದಲ್ಲಿನ ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ಗೆಲುವಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಭಾರತೀಯ ಕ್ರಿಕೆಟ್ ತಂಡವನ್ನು ಸೋಮವಾರ (ಆಗಸ್ಟ್ 4) ಶ್ಲಾಘಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿರುವ ತರೂರ್, ಪಂದ್ಯದುದ್ದಕ್ಕೂ ಭಾರತೀಯ ತಂಡ ಪ್ರದರ್ಶಿಸಿದ ಧೈರ್ಯ, ದೃಢನಿಶ್ಚಯ ಮತ್ತು ಉತ್ಸಾಹ ಅದ್ಭುತವಾಗಿತ್ತು. ಈ ಗೆಲುವಿನ ಬಗ್ಗೆ ಹೊಗಳಲು ಪದಗಳೇ ಸಾಲುತ್ತಿಲ್ಲ, ಎಂತಹ ಗೆಲುವು! ಎಂದು ಟ್ವೀಟ್ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಅದರಲ್ಲೂ ಓವಲ್ ಟೆಸ್ಟ್ನಲ್ಲಿ ಕೊಹ್ಲಿ ಗೈರು ತುಂಬಾ ಕಾಡಿತು ಎಂದಿದ್ದಾರೆ. ಅವರ ಧೈರ್ಯ ಮತ್ತು ತೀವ್ರತೆ, ಮೈದಾನದಲ್ಲಿನ ಸ್ಪೂರ್ತಿದಾಯಕ ಉಪಸ್ಥಿತಿ, ಹೇರಳವಾದ ಬ್ಯಾಟಿಂಗ್ ಕೌಶಲ್ಯಗಳು ಪಂದ್ಯದ ದಿಕ್ಕನ್ನೆ ಬದಲಿಸುತ್ತವೆ ಎಂದರು.
ಭಾರತದ ಯುವ ತಂಡಕ್ಕೆ ವಿರಾಟ್ ಕೊಹ್ಲಿ ಮಾರ್ಗದರ್ಶನದ ಅವಶ್ಯಕತೆ ಇದೆ, ಅವರು ತಮ್ಮ ನಿವೃತ್ತಿಯಿಂದ ಹಿಂದೆ ಸರಿದು ಮತ್ತೆ ಭಾರತ ಟೆಸ್ಟ್ ತಂಡದ ಪರ ಆಡುವಂತೆ ಒತ್ತಾಯಿಸಿದರು.(ಏಜೆನ್ಸೀಸ್)