ಎಲಾನ್​ ಮಸ್ಕ್​​ ಮಕ್ಕಳೊಂದಿಗೆ ಪ್ರಧಾನಿ ಮೋದಿ; ‘ಎಕ್ಸ್’​​​ ಮಾಲೀಕ ಹೇಳಿದ್ದಿಷ್ಟು

Untitled-design-3
Published on

ನವದೆಹಲಿ: ವಿಶ್ವದ ಶ್ರೀಮಂತ ಸೆಲೆಬ್ರಿಟಿಗಳಲ್ಲಿ ಒಬ್ಬರಾದ ಎಲಾನ್​​ ಮಸ್ಕ್, ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್​​ ಮತ್ತು ಪೋಸ್ಟ್​​ಗಳಿಗೆ ನೀಡುವ ಪ್ರತಿಕ್ರಿಯೆ ಮೂಲಕ ಆಗಾಗ್ಗೆ ಜಾಲತಾಣದಲ್ಲಿ ಮುನ್ನೆಲೆಯಲ್ಲಿರುತ್ತಾರೆ. ಪ್ರಸ್ತುತ ಎಕ್ಸ್​​ ಬಳಕೆದಾರರೊಬ್ಬರು ಹಂಚಿಕೊಂಡಿರುವ ಫೋಟೋಗೆ ಕಾಮೆಂಟ್​​ ಮಾಡುವ ಮೂಲಕ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಡಾಡ್ಜ್ ಡಿಸೈನರ್ ಎಂಬ ಎಕ್ಸ್​​​ ಬಳಕೆದಾರರೊಬ್ಬರು ಒಂಬತ್ತು ವರ್ಷಗಳ ಹಳೆಯದಾದ ಪ್ರಧಾನಿ ಮೋದಿ ಅವರ ಫೋಟೊವನ್ನು ಹಂಚಿಕೊಂಡಿದ್ದಾರೆ. ಎಲಾನ್​ ಮಸ್ಕ್​​ ಮತ್ತು ಅವರ ಮಕ್ಕಳು ಭಾರತದ ಪ್ರಧಾನಿ ಮೋದಿ ಅವರೊಂದಿಗೆ ಎಂದು ಶೀರ್ಷಿಕೆ ಬರೆದಿದ್ದಾರೆ. ಫೋಟೋದಲ್ಲಿ ಎಲಾನ್​​ ಮಸ್ಕ್​ ಅವರ ಒಬ್ಬ ಮಗ ಪ್ರಧಾನಿ ಮೋದಿ ಅವರೊಂದಿಗೆ ಹ್ಯಾಂಡ್​ಶೇಕ್​ ಮಾಡುತ್ತಿದ್ದರೆ, ಮತ್ತೊಬ್ಬ ಮಗ ಪ್ರಧಾನಿ ಮೋದಿ ಅವರನ್ನು ನೋಡುತ್ತಾ ನಗುತ್ತಿದ್ದಾನೆ. ಈ ಫೋಟೋದಲ್ಲಿ ಎಲಾನ್​ ಮಸ್ಕ್​​ ಕೂಡ ಇದ್ದು ಅವರು ನಗುತ್ತಿರುವುದನ್ನು ಕಾಣಬಹುದು. ಸದ್ಯ ಈ ಫೋಟೋ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಈ ಫೋಟೋಗೆ ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ. ಅಲ್ಲದೆ ಎಕ್ಸ್​​​ (ಈ ಹಿಂದೆ ಟ್ವಿಟರ್​) ಮಾಲೀಕ ಎಲಾನ್​ ಮಸ್ಕ್​ ಕೂಡ ಪ್ರತಿಕ್ರಿಯಿಸಿದ್ದಾರೆ. ಈ ಫೋಟೋ ನೋಡಿ ಎಲಾನ್​ ಮಸ್ಕ್​​ ಪ್ರೀತಿಯಿಂದ ಡಾಮಿಯನ್ ಮತ್ತು ಕಾಕೋಟ್ ಎಂದು ತಮ್ಮ​​ ಮಕ್ಕಳ ಹೆಸರನ್ನು ಬರೆದಿದ್ದಾರೆ. ಎಲಾನ್​​ ಮಸ್ಕ್​​ ಅವರ ಮೊದಲ ಪತ್ನಿ ಜಸ್ಟಿನ್ ಮಸ್ಕ್ ಅವರ ಮಕ್ಕಳು ಇವರು. ಸದ್ಯ ಈ ಫೋಟೋವನ್ನು ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಎಲಾನ್​ ಮಸ್ಕ್​​ ಅವರ ಪ್ರತಿಕ್ರಿಯೆ ನಂತರ ಸುಮಾರು 2,700 ಲೈಕ್‌ಗಳನ್ನು ಪಡೆದುಕೊಂಡಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net