ಲಖನೌ: ಅಯೋಧ್ಯೆಯಲ್ಲಿ 12 ವರ್ಷದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಪ್ರಮುಖ ಆರೋಪಿ ಒಡೆತನದ ಬೇಕರಿಯನ್ನು ಶನಿವಾರ(ಆಗಸ್ಟ್ 3) ಕೆಡವಲಾಯಿತು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತ್ರಸ್ತೆಯ ತಾಯಿಯನ್ನು ಭೇಟಿಯಾಗಿ ನ್ಯಾಯದ ಭರವಸೆ ನೀಡಿದ ಒಂದು ದಿನದ ನಂತರ ಈ ಕ್ರಮಕೈಗೊಳ್ಳಲಾಗಿದೆ.
ಇದನ್ನು ಓದಿ: ಇಂಡೋ-ಮ್ಯಾನ್ಮಾರ್ ಗಡಿಯಲ್ಲಿನ ಸ್ಫೋಟದ ಬಗ್ಗೆ ತನಿಖೆ ನಡೆಸಲಾಗುವುದು; ಸಿಎಂ ಬಿರೇನ್ ಸಿಂಗ್
ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಸಮಾಜವಾದಿ ಪಕ್ಷದ ಪದಾಧಿಕಾರಿಯಾಗಿರುವ ಮೊಯೀದ್ ಖಾನ್ ಅವರ ಬೇಕರಿಯನ್ನು ಕೇವಲ ಒಂದೂವರೆ ಗಂಟೆಯೊಳಗೆ ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಭಾರೀ ಪೊಲೀಸ್ ಕಣ್ಗಾವಲಿನಲ್ಲಿ ಎರಡು ಬುಲ್ಡೋಜರ್‌ಗಳ ಸಹಾಯದಿಂದ ನೆಲಸಮಗೊಳಿಸಲಾಯಿತು. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಡಳಿತ ಅನಿರುದ್ಧ ಪ್ರತಾಪ್ ಸಿಂಗ್ ಮತ್ತು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸತ್ಯೇಂದ್ರ ಸಿಂಗ್ ಮತ್ತು ಎಸ್‌ಡಿಎಂ ಸೋಹವಾಲ್ ಅಶೋಕ್ ಸೈನಿ ಅವರ ಸಮ್ಮುಖದಲ್ಲಿ ಭಾರೀ ಪೊಲೀಸ್ ಬಲದೊಂದಿಗೆ ಕ್ರಮವನ್ನು ಪ್ರಾರಂಭಿಸಲಾಯಿತು.
ಸಮಾಜವಾದಿ ಪಕ್ಷದ ಪದಾಧಿಕಾರಿಯಾಗಿರುವ ಬೇಕರಿ ಮಾಲೀಕ ಮೊಯೀದ್ ಖಾನ್ ಮತ್ತು ಅವರ ಉದ್ಯೋಗಿ ರಾಜು ಖಾನ್ ಅವರನ್ನು ಜುಲೈ 30ರಂದು ಪುರಕಲಂದರ್ನಿಂದ ಬಂಧಿಸಲಾಯಿತು. ಈ ಇಬ್ಬರು ಎರಡು ತಿಂಗಳ ಹಿಂದೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇತ್ತೀಚೆಗೆ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಸಂತ್ರಸ್ತೆ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಾಗ ಅಪರಾಧ ಬಯಲಾಗಿದೆ.
ಅಪ್ರಾಪ್ತ ಬಾಲಕಿಯ ಮೇಲಿನ ಹಲ್ಲೆಯನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಮತ್ತು ಆಕೆಯನ್ನು ಬೆದರಿಸಲು ಮತ್ತು ಕೃತ್ಯವನ್ನು ಮುಂದುವರಿಸಲು ಈ ವಿಡಿಯೋ ದೃಶ್ಯಗಳನ್ನು ಬಳಸಿದ್ದಾರೆ ಎಂದು ಅಯೋಧ್ಯೆಯ ಎಸ್‌ಎಸ್‌ಪಿ ರಾಜ್ ಕರಣ್ ನಯ್ಯರ್ ಬಹಿರಂಗಪಡಿಸಿದ್ದಾರೆ. ಎರಡೂವರೆ ತಿಂಗಳಿನಿಂದ ವಿಡಿಯೋ ಬಳಸಿಕೊಂಡು ಖಾನ್ ಆಕೆಯನ್ನು ಬೆದರಿಸಿ ಲೈಂಗಿಕ ಕಿರುಕುಳವನ್ನು ಮುಂದುವರಿಸಿದ್ದಾನೆ. ಖಾನ್ ತನ್ನ ಉದ್ಯೋಗಿ ರಾಜು ಸಹಾಯದಿಂದ ಈ ಕೃತ್ಯಗಳನ್ನು ಎಸಗಿದ್ದಾನೆ ಎಂದು ನಯ್ಯರ್ ಹೇಳಿದರು.(ಏಜೆನ್ಸೀಸ್)
ನಾರ್ಕೊ-ಟೆರರ್ ಲಿಂಕ್; ಪಾಕಿಸ್ತಾನದ ಐಎಸ್ಐ ಜತೆ ನಂಟು ಹೊಂದಿದ್ದ ಆರು ಅಧಿಕಾರಿಗಳು ವಜಾ