

ಬೀಜಿಂಗ್: ಫ್ರಿಡ್ಜ್ನಲ್ಲಿ ಇಡಲಾಗಿದ್ದ ಹೋಮ್ ಮೇಡ್ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವಿಗೀಡಾಗಿರುವ ದಾರುಣ ಘಟನೆ ಚೀನಾದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಹುದುಗಿಸಿದ ಜೋಳದ ಹಿಟ್ಟಿನ ನೂಡಲ್ ಅನ್ನು ಸುಮಾರು ಒಂದು ವರ್ಷಗಳ ಕಾಲ ಫ್ರಿಡ್ಜ್ನಲ್ಲಿ ಇಡಲಾಗಿತ್ತು. ಅದನ್ನು ಗಮನಿಸಿದೆ ಕುಟುಂಬ ಸೇವಿಸಿದೆ. ನೂಡಲ್ಸ್ನಲ್ಲಿದ್ದ ಬೊಂಗ್ರೆಕಿಕ್ ವಿಷಕಾರಿ ಆಮ್ಲದ ಪರಿಣಾಮ ಎಲ್ಲರೂ ಮೃತಪಟ್ಟಿದ್ದಾರೆ.
ಮೃತರೆಲ್ಲರು ಚೀನಾದ ಈಶಾನ್ಯ ಪ್ರಾಂತ್ಯ ಹೆಲಾಂಗ್ಜಿಯಾಂಗ್ನ ಜಿಕ್ಸಿ ನಗರದ ನಿವಾಸಿಗಳು. ಮೃತರಲ್ಲಿ 7 ಮಂದಿ ವಯಸ್ಕರು ಸಾವಿಗೂ ಐದು ದಿನಗಳ ಮುಂಚೆ ಚೀನಾದ ಸ್ಥಳೀಯ ಖಾದ್ಯ ಸುವಾಂಟಂಗ್ಜಿಯನ್ನು ಸೇವಿಸಿದ್ದರು. ಅಕ್ಟೋಬರ್ 10ರಂದು ಮೃತಪಟ್ಟರೆ, ಕೊನೆಯಲ್ಲಿ ಸೂಪ್ ಕುಡಿದು ಬದುಕುಳಿದಿದ್ದ ಮಹಿಳೆ ಸೋಮವಾರ ಸಾವಿಗೀಡಾಗಿದ್ದಾರೆ. ರುಚಿ ಇಲ್ಲವೆಂದು ಜೋಳದ ನೂಡಲ್ಸ್ ತಿರಸ್ಕರಿಸಿದ್ದ ಮೂವರು ಮಕ್ಕಳು ಅದೃಷ್ಟವಶಾತ್ ಬದುಕುಳಿದಿದ್ದಾರೆ.
ಬೊಂಗ್ರೆಕಿಕ್ ಆಸಿಡ್ ವಿಷವು ಹೆಚ್ಚು ಮಾರಕವಾಗಿರುತ್ತದೆ ಎಂದು ಹೆಲಾಂಗ್ಜಿಯಾಂಗ್ನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಆಹಾರ ಸುರಕ್ಷತಾ ನಿರ್ದೇಶಕ ಗಾವೋ ಫೈ ತಿಳಿಸಿದ್ದಾರೆ. ಕಲುಷಿತ ಆಹಾರ ಸೇವಿಸಿದ ಕೆಲವೇ ಗಂಟೆಗಳಲ್ಲಿ ಬೊಂಗ್ರೆಕಿಕ್ ಆಸಿಡ್ ರೋಗ ಲಕ್ಷಣಗಳು ಆರಂಭವಾಗುತ್ತವೆ. ಹೊಟ್ಟೆ ನೋವು, ಬೆವರುವುದು, ದೌರ್ಬಲ್ಯ ಮತ್ತು ಕೊನೆಯಲ್ಲಿ ಕೋಮಾಗೆ ಜಾರುತ್ತಾರೆ. 24 ಗಂಟೆಗಳಲ್ಲೇ ಸಾವು ಸಂಭವಿಸುತ್ತದೆ ಗಾವೋ ಮಾಹಿತಿ ನೀಡಿದ್ದಾರೆ.
ಬೊಂಗ್ರೆಕಿಕ್ ಆಸಿಡ್, ಲಿವರ್, ಕಿಡ್ನಿ, ಹೃದಯ ಮತ್ತು ಮೆದುಳು ಒಳಗೊಂಡಂತೆ ಅನೇಕ ಅಂಗಗಳಿಗೆ ಗಂಭೀರವಾಗ ಹಾನಿಯುಂಟು ಮಾಡಬಲ್ಲದು. ಒಮ್ಮೆ ವಿಷ ಸೇವಿಸಿದರೆ, ಸಾವಿನ ಪ್ರಮಾಣವು ಶೇ. 40 ರಿಂದ 100% ವರೆಗೆ ಇರುತ್ತದೆ. ಹೆಚ್ಚಿನ ಉಷ್ಣಾಂಶದಲ್ಲಿ ಬೇಯಿಸಿದಾಗ ಬೊಂಗ್ರೆಕಿಕ್ ಆಸಿಡ್ ತಡೆಯಬಹುದು. ಇದೊಂದು ಮಾರಣಾಂತಿಕ ವಿಷ. ಹುದುಗಿಸಿದ ತೆಂಗಿನಕಾಯಿಯಿಂದಲೂ ಇದು ಉತ್ಪತಿಯಾಗುತ್ತದೆ ಎಂದು ಗಾವೋ ತಿಳಿಸಿದರು.
ಇಂಡೋನೇಷ್ಯಾದ ಸಾಂಪ್ರದಾಯಿಕ ಖಾದ್ಯ ಟೆಂಪೆ ಬೊಂಗ್ರೆಕಿಕ್ ಅನ್ನು ಬ್ಯಾನ್ ಮಾಡಲಾಗಿದೆ. ಅನೇಕ ಜನರು ಮೃತಪಟ್ಟ ಹಿನ್ನೆಲೆಯಲ್ಲಿ ಖಾದ್ಯ ಸೇವನೆ ನಿಷೇಧಿಸಲಾಗಿದೆ. 1951 ಮತ್ತು 1975 ನಡುವೆ ಸರಾಸರಿ 288 ವಿಷ ಪ್ರಕರಣಗಳು ಮತ್ತು 34 ಸಾವುಗಳು ಬೊಂಗ್ರೆಕಿಕ್ ಸಂಬಂಧಿಸಿದ್ದು, ಪ್ರತಿವರ್ಷ ಇಂತಹ ಪ್ರಕರಣ ಇಂಡೋನೇಷ್ಯಾದಲ್ಲಿ ಕಂಡುಬರುತ್ತದೆ. ಮೊಜಾಂಬಿಕ್ನಲ್ಲಿ ನಡೆದ ಅಂತ್ಯಕ್ರಿಯೆಯ ನಂತರ ಸ್ಥಳೀಯವಾಗಿ ತಯಾರಿಸಿದ ಬಿಯರ್‌ನಲ್ಲಿ ಬೊಂಗ್‌ಕ್ರೆಕ್ ಆಸಿಡ್ನಿಂದ 75 ಸಾವು ಮತ್ತು 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. (ಏಜೆನ್ಸೀಸ್)