More

    VIDEO| ಅಶ್ಲೀಲ ವಿಡಿಯೋ​ ವೈರಲ್​: ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ..!

    ಕೊಚ್ಚಿ: ತಾನು ಬಾಲ ನಟಿಯಾಗಿ ಅಭಿನಯಿಸಿದ್ದ ಚಿತ್ರವೊಂದರ ಕೆಲ ದೃಶ್ಯಗಳ ಯೂಟ್ಯೂಬ್​ ಮತ್ತು ಪೋರ್ನ್​ ವೆಬ್​ಸೈಟ್​ಗಳಲ್ಲಿ ಅಪ್​​ಲೋಡ್​ ಆಗಿರುವ ಕುರಿತು ಕಾನೂನು ವಿದ್ಯಾರ್ಥಿನಿ ಸೋನಾ ಎಂ ಆಬ್ರಾಹಂ ಅಸಮಾಧಾನ ಹೊರಹಾಕಿದ್ದಾರೆ.

    ಮಲಯಾಳಂನ “ಫಾರ್​ ಸೇಲ್​” ಸಿನಿಮಾದಲ್ಲಿ ನಟಿಸುವಾಗ ನನಗೆ 14 ವರ್ಷವಾಗಿತ್ತು. 7 ವರ್ಷಗಳ ಬಳಿಕ ಚಿತ್ರದ ಕೆಲ ಆಕ್ಷೇಪಾರ್ಹ ದೃಶ್ಯಗಳು ಪೋರ್ನ್​​ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಆಗಿವೆ. ಇದನ್ನು ನೋಡಿ ನಾನು ಆತ್ಮಹತ್ಯೆಗೂ ಯತ್ನಿಸಿದ್ದೆ ಎಂದು ಸೋನಾ ನೋವು ತೋಡಿಕೊಂಡಿದ್ದಾರೆ. ವಿಡಿಯೋ ತೆಗೆದುಹಾಕಿಸಲು ನಾನು ಮತ್ತು ನನ್ನ ಕುಟುಂಬ ಎಲ್ಲ ಪ್ರಯತ್ನವನ್ನು ಮಾಡಿದೆವು. ಅಲ್ಲದೆ, ದೂರು ಸಹ ನೀಡಿದ್ದೇವೆ. ಆದರೆ, ಯಾವೊಬ್ಬ ಅಧಿಕಾರಿಯು ಸಹ ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

    ಅಸಹ್ಯಕರ ಥೀಮ್ ಹೊಂದಿದ್ದ ಫಾರ್​ ಸೇಲ್​ ಚಿತ್ರದಲ್ಲಿ ನಟಿಸಿದ್ದನ್ನು ನೆನೆಸಿಕೊಂಡರೆ ಈಗಲೂ ನನ್ನ ಮೈ ನಡುಗುತ್ತದೆ. ಚಿತ್ರದಲ್ಲಿ ಸ್ತ್ರೀದ್ವೇಷ ಅಂಶಗಳಿದ್ದವು. ಅಲ್ಲದೆ, ಅದನ್ನು ವೈಭವೀಕರಿಸಲಾಗಿತ್ತು. ಚಿತ್ರದಲ್ಲಿ ಕಾದಲ್​ ಸಂಧ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆಕೆಯ ತಂಗಿಯ ಮೇಲೆ ಅತ್ಯಾಚಾರ ನಡೆದಿದ್ದಕ್ಕೆ ಮನನೊಂದು ಅಕ್ಕ ಆತ್ಮಹತ್ಯೆ ಮಾಡಿಕೊಳ್ಳುವುದು ಚಿತ್ರದ ಕತೆಯಾಗಿತ್ತು ಎಂದು ಸೋನಾ ವಿವರಿಸಿದ್ದಾರೆ.

    ಇದನ್ನೂ ಓದಿ: VIDEO| ನದಿಯಲ್ಲಿ ಮೀನಿಗಾಗಿ ಗಾಳ ಹಾಕಿದ ವ್ಯಕ್ತಿಗೆ ಕಾದಿತ್ತು ಬಿಗ್​ ಶಾಕ್​..!

    ಚಿತ್ರದಲ್ಲಿ ಸಂಧ್ಯಾಳ ತಂಗಿ ಪಾತ್ರವನ್ನು ಸೋನಾ ನಿರ್ವಹಿಸಿದ್ದರಂತೆ. ಆ ಚಿತ್ರದಲ್ಲಿ ನಟಿಸಿದ ಪಾಪ ಪ್ರಜ್ಞೆಯಿಂದ ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೂ ಹೋಗಿದ್ದೆ ಎನ್ನುತ್ತಾರೆ ಸೋನಾ. ಆದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ನಾನು ನನ್ನ ಕಹಿ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಮರ್ಥಳಾಗಿದ್ದೇನೆ. ತಂಗಿಯ ಮೇಲೆ ಅತ್ಯಾಚಾರವಾಗುವ ದೃಶ್ಯ ಚಿತ್ರಕ್ಕೆ ತುಂಬಾ ಅವಶ್ಯಕವೆಂದು ನಿರ್ದೇಶಕರು ಹೇಳಿದ್ದರು. ಆವಾಗ ನನಗೆ 14 ವರ್ಷ ವಯಸ್ಸಾಗಿತ್ತು. 150ಕ್ಕೂ ಹೆಚ್ಚು ಸದಸ್ಯರು ತುಂಬಿರುವ ಸಿನಿಮಾ ಸೆಟ್​ನಲ್ಲಿ ಆ ದೃಶ್ಯದಲ್ಲಿ ನಟಿಸಲು ನನಗೆ ಹಿತವೆನಿಸುತ್ತಿಲ್ಲ ಎಂದು ಹೇಳಿದ್ದೆ. ಅಲ್ಲದೆ, ಆ ದೃಶ್ಯದ ಮಹತ್ವವ ಅಥವಾ ಚಲನಚಿತ್ರವು ಸಮಾಜಕ್ಕೆ ನೀಡುತ್ತಿರುವ ಸಂದೇಶವನ್ನು ಅರಿಯಲು ಸಾಧ್ಯವಾಗದ ವಯಸ್ಸಿನಲ್ಲಿದ್ದೆ ಎಂದು ಸೋನಾ ಫೇಸ್​ಬುಕ್​ ವಿಡಿಯೋದಲ್ಲಿ ಸುದೀರ್ಘವಾಗಿ ತಿಳಿಸಿದ್ದಾರೆ.

    VIDEO| ಅಶ್ಲೀಲ ವಿಡಿಯೋ​ ವೈರಲ್​: ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ..!

    ಕೊನೆಗೂ ಆ ದೃಶ್ಯವನ್ನು ಕಲೂರ್​ನಲ್ಲಿರುವ ನಿರ್ದೇಶಕರ ಕಚೇರಿಯಲ್ಲಿ ನಮ್ಮ ಪಾಲಕರು ಹಾಗೂ ಕೆಲವೇ ಸಿಬ್ಬಂದಿ ಸಮ್ಮುಖದಲ್ಲಿ ಚಿತ್ರೀಕರಿಸಲಾಯಿತು. ಚಿತ್ರೀಕರಣ ಮುಗಿದು ನನ್ನ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೂ ಮುಗಿಸಿ ಸಾಮಾನ್ಯ ಜೀವನಕ್ಕೆ ನಾನು ಮರಳಿದ್ದೆ. 11ನೇ ತರಗತಿ ಅಥವಾ ಪಿಯು ಆರಂಭದಲ್ಲಿ ಅತ್ಯಾಚಾರ ದೃಶ್ಯಗಳು ಯೂಟ್ಯೂಬ್​ ಮತ್ತು ಪೋರ್ನ್​​ ವೆಬ್​ಸೈಟ್​ನಲ್ಲಿ ಸೋರಿಕೆಯಾಗಿತ್ತು. ಇದರಿಂದ ತುಂಬಾ ಒತ್ತಡಕ್ಕೆ ಸಿಲುಕಿದೆ. ಮಧ್ಯಮ ವರ್ಗದ ಕುಟುಂಬವಾದ್ದರಿಂದ ಹಾಗೂ ಆರ್ಥಿಕವಾಗಿಯೂ ದುರ್ಬಲವಾಗಿದ್ದರಿಂದ ತುಂಬಾ ಸಮಸ್ಯೆ ಎದುರಿಸಬೇಕಾಯಿತು. ನನ್ನ ಶಿಕ್ಷಕರು, ಸಂಬಂಧಿಕರು ಮತ್ತು ಸ್ನೇಹಿತರು ನನ್ನನ್ನು ಅನುಮಾನದಿಂದ ನೋಡಲು ಶುರು ಮಾಡಿದರು. ಆದರೆ, ನನ್ನ ಕುಟುಂಬ ನನ್ನ ಪ್ರತಿಭೆ ಹಾಗೂ ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ತುಂಬಾ ಪ್ರೀತಿಸಿದರು. ಆದರೆ, ಅವರು ಸಹ ಈಗ ಸಿನಿಮಾ ಎಂದರೆ ಹೆದರುತ್ತಾರೆ. ಸಮಾಜದಿಂದ ಕೇಳಿಬಂದ ನಿಂದನೆಗಳಿಂದ ತುಂಬಾ ನೋವಾಯಿತು. ನನಗೆ ಒಂದು ರೀತಿಯ ಸಮಸ್ಯೆ ಇರುವಂತೆ ಜನರು ನನ್ನನ್ನು ನೋಡುತ್ತಾರೆ. ನನ್ನ ಟೀಚರ್​ ನನ್ನನ್ನು ಒಂದು ರೀತಿಯಲ್ಲಿ ನೋಡಿದ್ದು ನಿಜಕ್ಕೂ ನನಗೆ ತುಂಬಾ ನೋವಾಯಿತು ಎನ್ನುತ್ತಾರೆ ಸೋನಾ.

    ಇದನ್ನೂ ಓದಿ: ಜಡ್ಜ್​ಗೆ ಬೆದರಿಕೆ ಪತ್ರ: ಷಡ್ಡಕನ ಸಿಕ್ಕಿಸಲು ಹೋಗಿ ಸಿಕ್ಕಿಬಿದ್ದ, ಆಸ್ತಿಗಾಗಿ ನಾದಿನಿ ಮೇಲೆ ಕಣ್ಣು

    ಇಷ್ಟೇಲ್ಲ ನೋವು ಅನುಭವಿಸಿದರೂ ಗಟ್ಟಿಯಾಗಿ ನಿಂತಿರುವ ಸೋನು ಒಂದು ಬಲವಾದ ಸಂದೇಶವನ್ನು ನೀಡಿದ್ದಾರೆ. ಏನಾದರೂ ಕಳೆದುಕೊಂಡಿರುವುದಾಗಿ ಸೋನು ಭಾವಿಸುವುದೇ ಇಲ್ಲವಂತೆ. ಇನ್ನೊಬ್ಬರು ನನ್ನ ಮೇಲೇಕೆ ಅಷ್ಟೊಂದು ಕಾಳಜಿ ತೋರುತ್ತಿದ್ದಾರೆಂಬುದೇ ಆಕೆಗೆ ಆಶ್ಚರ್ಯವಂತೆ. ಈ ಪ್ರಕರಣದಲ್ಲಿ ನನ್ನದೇ ತಪ್ಪು ಎಂದು ಮನವರಿಕೆ ಮಾಡಲು ಆಪ್ತರು ಸಹ ಪ್ರಯತ್ನಿಸಿದ್ದರು ಎಂದು ಸೋನಾ ಹೇಳಿದ್ದಾರೆ.

    ವಿಡಿಯೋ ತೆಗೆಸಲು ನಾನು ಮತ್ತು ನನ್ನ ಕುಟುಂಬ ಎಲ್ಲ ಸಂಸ್ತೆಗಳಿಗೂ ಮನವಿ ಮಾಡಿದೆವು. ಈ ಕ್ಷಣದವರೆಗೂ ನಾವು ಧನಾತ್ಮಕ ಸ್ಪಂದನೆ ಸ್ವೀಕರಿಸಿಲ್ಲ ಎಂದು ವ್ಯವಸ್ಥೆಯ ವಿರುದ್ಧ ಸೋನಾ ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್​)

    I have always been afraid of the society and judgements and i took the abuse as if i deserved it .But i didn't deserve any bit of what i went through all these years. I am proud of myself, and the online abusers and the perpetrators are the ones who should be ashamed of themselves. Now the #refusetheabuse campaign started by #WCC has given me so much strength and courage to open up and talk about things. I hope to see some changes towards the misogynistic and inhumane treatment and attitude. Looking forward Women in Cinema Collective

    Posted by Sona M Abraham on Saturday, October 17, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts