More

    ಕೇರಳ ಟು ಲಂಡನ್​ಗೆ ಸೈಕಲ್ ಸವಾರಿ

    ಭಟ್ಕಳ: ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಫಯೀಸ್ ಅಶ್ರಫ್ ಅಲಿ ಎನ್ನುವ ಯುವಕನೋರ್ವ ಕೇರಳ ರಾಜಧಾನಿಯಿಂದ ಲಂಡನ್​ಗೆ ಸೈಕಲ್ ಅಭಿಯಾನ ಆರಂಭಿಸಿದ್ದಾರೆ. ಸೋಮವಾರ ಭಟ್ಕಳಕ್ಕೆ ಆಗಮಿಸಿದ್ದ ಅವರನ್ನು ಸ್ವಾಗತಿಸಿ ಬೀಳ್ಕೊಡಲಾಯಿತು.

    ಕೇರಳದ ಕೋಜಿಕ್ಕೋಡ್ ಜಿಲ್ಲೆಯ ತಲಕ್ಕುಲತ್ತೂರ್​ನ ಫಯೀಸ್ ಅಶ್ರಫ್ ಅಲಿ ಸೈಕಲ್ ಸವಾರಿ ನಡೆಸುತ್ತಿರುವ ಯುವಕ. ಫಿಟ್​ನೆಸ್ ಮತ್ತು ಆರೋಗ್ಯದ ಬಗ್ಗೆ ಜಾಗೃತಿ, ರೋಟರಿ ಮಿಷನ್​ನ ಎಂಡ್ ಪೋಲಿಯೋ ನೌ, ಸಂಘರ್ಷ ಪರಿಹಾರ ಮತ್ತು ಶಾಂತಿ ನಿರ್ವಣದ ಉತ್ತೇಜನ, ಜಾಗತಿಕವಾಗಿ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿಯ ಮತ್ತು ಮಲಯಾಳಂನ ಸೌಂದರ್ಯದ ಸಮಗ್ರ ಮಾಹಿತಿ, ಕ್ಯಾಂಪಸ್​ಗಳಲ್ಲಿ ಜೀರೋ ಕಾರ್ಬನ್ ಎಮಿಷನ್ ಮತ್ತು ಆಂಟಿ ಡ್ರಗ್ ಅಭಿಯಾನದ ಮೇಲೆ ಕೇಂದ್ರೀಕರಿಸುವ ಉದ್ದೇಶದಿಂದ ಸೈಕಲ್ ಸವಾರಿ ಹಮ್ಮಿಕೊಂಡಿದ್ದಾರೆ.

    ಫಯೀಸ್ ಅವರು 2016ರಲ್ಲಿ ನೆಟ್​ವರ್ಕಿಂಗ್ ಇಂಜಿನಿಯರ್ ಕೆಲಸವನ್ನು ತೊರೆದು, ಪ್ರಪಂಚದಾದ್ಯಂತ ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ಹರಡುವ ಉದ್ದೇಶದಿಂದ ಸೈಕಲ್ ಸವಾರಿ ಆರಂಭಿಸಿದರು. 35 ದೇಶಗಳಲ್ಲಿ 30,000 ಕಿ.ಮೀ. ಕ್ರಮಿಸಿ ಸುಮಾರು 450 ದಿನಗಳಲ್ಲಿ ಲಂಡನ್ ತಲುಪುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2019ರಲ್ಲಿ ಅಲಿ ಅವರು, ತಮ್ಮ ಒಡನಾಡಿ ಅಜಿತ್ ಅವರೊಂದಿಗೆ ಕೇರಳದಿಂದ ಸಿಂಗಾಪುರಕ್ಕೆ ಸವಾರಿ ಕೈಗೊಂಡಿದ್ದರು.

    ಭಟ್ಕಳದಲ್ಲಿ ಜೆಡಿಎಸ್ ಮುಖಂಡ ಇನಾಯತ್ ಉಲ್ಲಾ ಶಾಬಂದ್ರಿ ಸ್ವಾಗತಿಸಿದರು. ನಿರ್ಮಾಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ.ಬಿ. ಇಬ್ರಾಹಿಂ, ಟಿಎಂಸಿ ಸ್ಥಾಯಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಇಮ್ಶಾದ್ ಮುಕ್ತೇಸರ, ಸಮಾಜ ಸೇವಕ ನಜೀರ್ ಕಾಸಿಂಜಿ, ನೂರ್ ಮಸೀದಿ ಕಾರ್ಯದರ್ಶಿ ಜೀಶಾನ್ ಖತೀಬ್, ಫರ್ಹಾನ್ ಖತೀಬ್, ಬಿಎಂವೈಎಫ್ ಸದಸ್ಯ ಫೈಸಲ್ ಅರ್ವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts