More

    ಗ್ರಾಮೀಣ ಕಲೆಗಳಿಂದ ಸಂಸ್ಕೃತಿ ಉಳಿವು

    ಸೊರಬ: ಗ್ರಾಮೀಣ ಸಂಸ್ಕೃತಿಯನ್ನು ಅನಾವರಣಗೊಳಿಸಲು ನಾಟಕದಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ಉಳಿಸಿ ಬೆಳೆಸಿದಾಗ ಕಲೆಗಳ ಉಳಿವು ಸಾಧ್ಯ ಎಂದು ಸಮಾಜ ಸೇವಕ ದಂತ ವೈದ್ಯ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.
    ತಾಲೂಕಿನ ಎನ್.ದೊಡ್ಡೇರಿ ಗ್ರಾಮದಲ್ಲಿ ಈಶ್ವರ, ಬಸವೇಶ್ವರ ಹಾಗೂ ಶ್ರೀ ರಾಮಾಂಜನೇಯ ದೇವರ ವಾರ್ಷಿಕೋತ್ಸವ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಆಧುನಿಕ ತಂತ್ರಜ್ಞಾನದ ಸುಳಿಯಲ್ಲಿ ಗ್ರಾಮೀಣ ಸಂಸ್ಕೃತಿ ಬಿಂಬಿಸುವ ಕಲೆಗಳು ನಶಿಸುತ್ತಿವೆ. ನಾಟಕಗಳನ್ನು ಪ್ರದರ್ಶಿಸುವುದರಿಂದ ಕಲೆಯ ಉಳಿವು ಸಾಧ್ಯ. ಗ್ರಾಮೀಣ ಜೀವನದ ಅವಿಭಾಜ್ಯ ಅಂಗವಾಗಿರುವ ಹಬ್ಬ, ಜಾನಪದ ಕ್ರೀಡೆಗಳು, ಯಕ್ಷಗಾನ, ಕೋಲಾಟ, ನಾಟಕ ಪರಂಪರೆಗಳನ್ನು ಉಳಿಸಿಕೊಂಡಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ. ಮನುಷ್ಯ ಕಲಿಯುವಿಕೆಯಿಂದ ತನ್ನ ಪ್ರತಿಭೆ ಅನಾವರಣದಿಂದ ಪರಿಣತನಾಗಲು ಸಾಧ್ಯ ಎಂದರು.

    ಗ್ರಾಮದ ಬೈಲಪ್ಪ ಕಲೆಯ ಕುರಿತು ಮಾತನಾಡಿ, ಕಲೆ ಎಂಬ ಪದ ಚಿಕ್ಕದಾಗಿದ್ದರೂ ಅದರ ವಿಸ್ತಾರ ದೊಡ್ಡದು. ಕಲೆ ಮತ್ತು ಕಲಾವಿದರ ನಡುವೆ ಅವಿನಾಭಾವ ಸಂಬಂಧವಿದೆ. ಕಲೆಯನ್ನು ಕಲಿಯಲು ಸಾಧ್ಯವೇ ಹೊರತು ಕದಿಯಲು ಸಾಧ್ಯವಿಲ್ಲ ಎಂದು ಹೇಳಿದರು. ರಾಜು, ವೈ.ಆರ್.ನಾಡಿಗೇರ್, ರಾಮಪ್ರಸಾದ್ ನಾಡಿಗೇರ್ ಕಾರ್ಯಕ್ರಮ ಉದ್ಘಾಟಿಸಿದರು. ವೀರಭದ್ರಪ್ಪ, ಪರಶುರಾಮ್, ಶಿಕ್ಷಕ ಸತ್ಯನಾರಾಯಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts