More

    ಬದುಕಿಗೆ ಸಂದೇಶ ನೀಡುವ ನಾಟಕಗಳು

    ಕುಕನೂರು: ನಾಟಕಗಳು ಸಾಮಾಜಿಕ ಬದಲಾವಣೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಜಾತ್ರೆ, ಉತ್ಸವ ಸಂದರ್ಭದಲ್ಲಿ ಪ್ರದರ್ಶಿಸುವ ಅವಶ್ಯವಿದೆ ಎಂದು ಶಿಕ್ಷಕ ಶೇಖರಗೌಡ ಪೊಲೀಸ್ ಪಾಟೀಲ್ ಹೇಳಿದರು.

    ಚಂಡಿನಾಳ ಗ್ರಾಮದಲ್ಲಿ ದ್ಯಾಮಾಂಬಿಕಾದೇವಿ ಹಾಗೂ ಕರಿಯಮ್ಮದೇವಿ ಜಾತ್ರಾ ಮಹೋತ್ಸವ ನಿಮಿತ್ತ ಶ್ರೀ ಮಾರುತೇಶ್ವರ ತರುಣ ನಾಟ್ಯ ಸಂಘದಿಂದ ಆಯೋಜಿಸಿದ್ದ ‘ಕಿತ್ತೂರಿನ ಹುಲಿ’ ನಾಟಕ ಪ್ರದರ್ಶನ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

    ನಾಟಕಗಳು ಮನರಂಜನೆಯೊಂದಿಗೆ ಬದುಕಿಗೆ ಒಳ್ಳೆಯ ಸಂದೇಶ ನೀಡುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಹಬ್ಬ, ಹರಿದಿನ, ಜಾತ್ರೆಗಳಲ್ಲಿ ಪೂರ್ವಜರ ಕಾಲದಿಂದಲೂ ನಾಟಕ ಪ್ರದರ್ಶನ ನೀಡಲಾಗುತ್ತಿದೆ. ನಾಟಕಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತವೆ ಎಂದರು.

    ಶ್ರೀ ವಿಜಯ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಶ್ರೀನಾಥ ರೆಡ್ಡಿ, ಗವಿಸಿದ್ದಗೌಡ ಪೊಲೀಸ್ ಪಾಟೀಲ್, ನಾಗಪ್ಪ ಹೊಸಮನಿ, ದೇವಪ್ಪ ಹಟ್ಟಿ, ಫಕೀರಪ್ಪ ಲಿಂಗದಳ್ಳಿ, ಶಂಕರಗೌಡ ಪೊಲೀಸ್ ಪಾಟೀಲ್, ಸಣ್ಣ ಹನುಮಂತಪ್ಪ ಹೊಸಮನಿ, ಸಣ್ಣಹನಮಂತಪ್ಪ ಹೊಸಮನಿ, ಶಿವಕುಮಾರ ಎಮ್ಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts