More

  ವಿವಿಧ ರಾಜ್ಯಗಳಲ್ಲಿ ಎನ್​ಐಎ ದಾಳಿ: ನಕಲಿ ನೋಟು ಜಾಲದಲ್ಲಿನ ಬಳ್ಳಾರಿ ವ್ಯಕ್ತಿ ಯಾರು?

  ಮುಂಬೈ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ನಾಲ್ಕು ರಾಜ್ಯಗಳಲ್ಲಿ ದಾಳಿ ನಡೆಸಿದ್ದು, ನಕಲಿ ಕರೆನ್ಸಿ ನೋಟುಗಳ ಉತ್ಪಾದನೆ ಮತ್ತು ಚಲಾವಣೆಯಲ್ಲಿ ತೊಡಗಿರುವ ಜಾಲವನ್ನು ಪತ್ತೆ ಮಾಡಿದೆ. 6,600 ಮೌಲ್ಯದ ನಕಲಿ ನೋಟುಗಳು (500, 200 ಮತ್ತು 100 ರೂ. ಮುಖಬೆಲೆಯ) ಹಾಗೂ ಕರೆನ್ಸಿ ಪ್ರಿಂಟಿಂಗ್ ಪೇಪರ್, ಪ್ರಿಂಟರ್, ಡಿಜಿಟಲ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡಿದೆ.

  ನವೆಂಬರ್ 24 ರಂದು ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ಎನ್‌ಐಎ ಈ ಕ್ರಮ ಕೈಗೊಂಡಿದೆ. ವಿವಿಧ ರಾಜ್ಯಗಳ ಗಡಿಗಳಾದ್ಯಂತ ನಕಲಿ ಕರೆನ್ಸಿ ನೋಟುಗಳನ್ನು ಸಾಗಿಸಲು ಮತ್ತು ಚಲಾವಣೆಯನ್ನು ಉತ್ತೇಜಿಸುವ ದೊಡ್ಡ ಪಿತೂರಿಯ ಭಾಗವೆಂದು ಶಂಕಿಸಲಾದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ಕೈಗೊಳ್ಳಲಾಗಿದೆ.

  ನಂಬಲರ್ಹ ಮಾಹಿತಿಯ ಮೇರೆಗೆ ಎನ್‌ಐಎ ತಂಡಗಳು ವಿವಿಧ ರಾಜ್ಯಗಳ ಪ್ರಮುಖ ಶಂಕಿತರ ಆವರಣದಲ್ಲಿ ತಪಾಸಣೆ ನಡೆಸಿವೆ. ಶಂಕಿತ ಆರೋಪಿಗಳಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಹುಲ್ ತಾನಾಜಿ ಪಾಟೀಲ್, ಯವತ್ಮಲ್​ ಜಿಲ್ಲೆಯ ಶಿವ ಪಾಟೀಲ್, ಉತ್ತರ ಪ್ರದೇಶದ ಶಹಜಾನ್‌ಪುರ ಜಿಲ್ಲೆಯ ವಿವೇಕ್ ಠಾಕೂರ್, ಕರ್ನಾಟಕದ ಬಳ್ಳಾರಿ ಜಿಲ್ಲೆಯ ಮಹೇಂದರ್ ಮತ್ತು ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಶಶಿಭೂಷಣ್ ಸೇರಿದ್ದಾರೆ.

  ವಿವೇಕ್ ಠಾಕೂರ್ ಮನೆಯಲ್ಲಿ ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ. ಈತ ಶಿವ ಪಾಟೀಲ ಮತ್ತು ಇತರರೊಂದಿಗೆ ಸೇರಿ ನೆರೆಯ ದೇಶಗಳಿಂದ ನಕಲಿ ಕರೆನ್ಸಿ ಮತ್ತು ಮುದ್ರಣದ ಬಿಡಿಭಾಗಗಳನ್ನು ಪಡೆದು ಭಾರತದೊಳಗೆ ಚಲಾವಣೆ ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಮಹೇಂದರ್ ಮನೆಯಲ್ಲಿ ಪ್ರಿಂಟರ್ ವಶಪಡಿಸಿಕೊಳ್ಳಲಾಗಿದೆ.

  ರಾಹುಲ್ ತಾನಾಜಿ ಪಾಟೀಲನು ನಕಲಿ ನೋಟುಗಳನ್ನು ಪೂರೈಸುವುದಕ್ಕಾಗಿ ವಂಚನೆಯಿಂದ ಪಡೆದ ಸಿಮ್ ಕಾರ್ಡ್‌ಗಳನ್ನು ಪಾವತಿ ಸ್ವೀಕರಿಸಲು ಬಳಸುತ್ತಿದ್ದರು ಎಂದು ತಿಳಿದುಬಂದಿದೆ.

  ಲೋಕಸಭೆ ಚುನಾವಣೆಯ ಸೆಮಿಫೈನಲ್​ ಫಲಿತಾಂಶ ಶೀಘ್ರ; ಮತ ಎಣಿಕೆಯಲ್ಲಿ ವಿಜಯಮಾಲೆ ಯಾರಿಗೆ?

  ವಿವಾಹ ಭೋಜನವಿದು… ಅತಿಥಿಗಳೇ ರೊಟ್ಟಿ ತಯಾರಕರು… ನೆಟ್ಟಿಗರ ಗಮನ ಸೆಳೆದ ವಿಶಿಷ್ಟ ವಿಡಿಯೋ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts