ರಶ್ಮಿಕಾ ಮಂದಣ್ಣನ ಕಪ್ಪು ಲುಕ್‌ಗೆ ಫಿದಾ ಆದ ಫ್ಯಾಷನ್ ಲೋಕ; ಈ ಗೌನ್ ತಯಾರಿಗೆ 350 ಗಂಟೆಯಂತೆ! | Rashmika Mandanna

ಮಿಲಾನೊ ಕಾರ್ಯಕ್ರಮದಲ್ಲಿ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ತಮ್ಮ ವಿಶೇಷ ಕಪ್ಪು ಕೌಚರ್ ಲುಕ್‌ನಿಂದ ಗಮನ ಸೆಳೆದಿದ್ದಾರೆ. ರಶ್ಮಿಕಾ ಅವರ ಈ ಸ್ಟೈಲಿಶ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Rashmika Mandanna Black Couture
2026ರ ‘ಮಿಲನ್‌ನ ವೋಗ್ ವರ್ಲ್ಡ್’ನಲ್ಲಿ ಕಪ್ಪು ಕೌಚರ್ ಗೌನ್‌ನಲ್ಲಿ ರಶ್ಮಿಕಾ ಚಮಕ್​
Published on

Vogue World 2026 in Milan: ಮಿಲಾನೊ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ ತಮ್ಮ ವಿಶೇಷ ಕಪ್ಪು ಕೌಚರ್ ಲುಕ್‌ನಿಂದ ಗಮನ ಸೆಳೆದಿದ್ದಾರೆ. ಗ್ಯಾಲೆರಿಯಾ ವಿಟ್ಟೋರಿಯೊ ಎಮ್ಯಾನುಯೆಲೆ ದ್ವಿತೀಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಖತ್​ ಮಿಂಚಿದ್ದಾರೆ.

350 ಗಂಟೆಗಳಲ್ಲಿ ಸಿದ್ಧವಾದ ಗೌನ್

ರಶ್ಮಿಕಾ ಧರಿಸಿದ್ದ ಶಿಲ್ಪದಂತೆ ವಿನ್ಯಾಸಗೊಳಿಸಿದ ಕಪ್ಪು ಲೇಸ್ ಗೌನ್ ಅನ್ನು ಖ್ಯಾತ ಭಾರತೀಯ ವಿನ್ಯಾಸಕಿ ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ್ದಾರೆ. ಅವರ ‘ಮೂನ್‌ಲಿಟ್ ಪ್ಯಾಲೇಸ್’ ಕೌಚರ್ ಕಲೆಕ್ಷನ್‌ನ ಈ ಗೌನ್ ಸಿದ್ಧಪಡಿಸಲು ಬರೋಬ್ಬರಿ 350 ಗಂಟೆಗಳು ಬೇಕಾಗಿದೆ.

ಗೌನ್‌ನಲ್ಲಿ ದೇಹದ ಆಕಾರಕ್ಕೆ ತಕ್ಕಂತೆ ರೂಪ ನೀಡುವ ವಿನ್ಯಾಸ, ಸೂಕ್ಷ್ಮ ಲೇಸ್ ಕಸೂತಿ ಹಾಗೂ ಲೋಹದ ಅಲಂಕಾರಗಳಿವೆ. ಕಪ್ಪು ಬಣ್ಣದ ಈ ವಿನ್ಯಾಸದಲ್ಲಿ ಡಾರ್ಕ್ ರೊಮ್ಯಾಂಟಿಸಿಸಂ ಮತ್ತು ಶಿಲ್ಪದ ರೀತಿಯ ಫ್ಯಾಷನ್‌ನ್ನು ಒಟ್ಟಿಗೆ ತೋರಿಸಲಾಗಿದೆ.

ಸ್ವರೋವ್ಸ್ಕಿ, ಗುಚ್ಚಿ ಜೊತೆ ಸ್ಟೈಲಿಶ್ ಲುಕ್

ಈ ಲುಕ್‌ಗೆ ರಶ್ಮಿಕಾ ಸ್ವರೋವ್ಸ್ಕಿ(Swarovski) ಉಂಗುರಗಳು ಮತ್ತು ಇಯರ್ ಕಫ್ಸ್, ಗುಚ್ಚಿ ಬ್ಯಾಗ್ ಹಾಗೂ ಅಕ್ವಝುರಾ ಹೀಲ್ಸ್ ಧರಿಸಿದ್ದರು. ಸಾಫ್ಟ್ ವೇವಿ ಹೇರ್‌ಸ್ಟೈಲ್ ಕೂಡ ಲುಕ್‌ಗೆ ಮತ್ತಷ್ಟು ಗ್ಲಾಮರ್ ನೀಡಿದೆ.

ಇದನ್ನೂ ಓದಿ: ಕಾಲಿನ ಮೇಲೆ ‘ಓಂ ಶ್ರೀ ಮಹಾಲಕ್ಷ್ಮ್ಯೈ ನಮಃ’ ಟ್ಯಾಟೂ! ಹರಿದ್ವಾರದಲ್ಲಿ ವಿದೇಶಿ ಮಹಿಳೆ ವಿಡಿಯೋ ವೈರಲ್ | Religious tattoo on leg

ಈ ಸಂಪೂರ್ಣ ಲುಕ್‌ಗೆ ಸೆಲೆಬ್ರಿಟಿ ಸ್ಟೈಲಿಸ್ಟ್ ಪ್ರಿಯಾಂಕಾ ಕಪಾಡಿಯಾ ಸ್ಟೈಲಿಂಗ್ ಮಾಡಿದ್ದಾರೆ. ವೋಗ್ ವರ್ಲ್ಡ್ 2026ರ ಅಧಿಕೃತ ರೆಡ್ ಕಾರ್ಪೆಟ್ ಕವರೇಜ್‌ನಲ್ಲೂ ರಶ್ಮಿಕಾ ಅನಾಮಿಕಾ ಖನ್ನಾ ಗೌನ್ ಮತ್ತು ಸ್ವರೋವ್ಸ್ಕಿ ಆಭರಣದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net