ಕಾಲಿನ ಮೇಲೆ ‘ಓಂ ಶ್ರೀ ಮಹಾಲಕ್ಷ್ಮ್ಯೈ ನಮಃ’ ಟ್ಯಾಟೂ! ಹರಿದ್ವಾರದಲ್ಲಿ ವಿದೇಶಿ ಮಹಿಳೆ ವಿಡಿಯೋ ವೈರಲ್ | Religious tattoo on leg

ಹರಿದ್ವಾರದಲ್ಲಿ ವಿದೇಶಿ ಮಹಿಳೆಯ ಕಾಲಿನ ಮೇಲೆ ‘ಓಂ ಶ್ರೀ ಮಹಾಲಕ್ಷ್ಮ್ಯೈ ನಮಃ’ ಟ್ಯಾಟೂ ಹಾಕಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಟ್ಯಾಟೂ ಕಲಾವಿದನ ವಿರುದ್ಧ ಕ್ರಮಕ್ಕೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ
Controversy over religious tattoo on the leg
ಹರಿದ್ವಾರದಲ್ಲಿ ಕಾಲಿನ ಮೇಲೆ ಧಾರ್ಮಿಕ ಟ್ಯಾಟೂ ವಿವಾದ
Published on

Religious tattoo on leg: ಹರಿದ್ವಾರದಲ್ಲಿ ವಿದೇಶಿ ಮಹಿಳೆಯೊಬ್ಬರ ಕಾಲಿನ ಮೇಲೆ ‘ಓಂ ಶ್ರೀ ಮಹಾಲಕ್ಷ್ಮ್ಯೈ ನಮಃ’ ಎಂಬ ಧಾರ್ಮಿಕ ಬರಹದ ಟ್ಯಾಟೂ ಕಾಣಿಸಿಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ದೃಶ್ಯದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿದೇಶಿ ಮಹಿಳೆ ಚಪ್ಪಲಿ ಧರಿಸಿ ಪ್ರವಾಸಿಗರ ಜೊತೆ ಅಂಗಡಿಯೊಂದರ ಮುಂದೆ ನಿಂತಿದ್ದಾಗ, ಕಾಲಿನ ಮೇಲಿದ್ದ ಟ್ಯಾಟೂ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನ್ಯಾಷನಲ್ ಹಿಂದೂ ಪವರ್ ಆರ್ಗನೈಸೇಶನ್ ರಾಜ್ಯಾಧ್ಯಕ್ಷ ರಾಘವೇಂದ್ರ ಭಾಟ್ನಾಗರ್ ಹಾಗೂ ಸನಾತನ ಮಹಿಳೆ ರೂಪ್ ಕೌರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಟ್ಯಾಟೂ ಕಲಾವಿದನ ವಿರುದ್ಧ ಕ್ರಮಕ್ಕೆ ಆಗ್ರಹ

ವಿದೇಶಿ ಮಹಿಳೆಗೆ ಭಾರತೀಯ ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದಿರಬಹುದು. ಹೀಗಾಗಿ ಆಕೆಯ ತಪ್ಪಿಗಿಂತ, ಕಾಲಿನ ಮೇಲೆ ಈ ಟ್ಯಾಟೂ ಹಾಕಿದ ಕಲಾವಿದನ ಜವಾಬ್ದಾರಿ ಹೆಚ್ಚು ಎಂದು ಅವರು ಹೇಳಿದ್ದಾರೆ. ಟ್ಯಾಟೂ ಹಾಕಿದ ವ್ಯಕ್ತಿಯನ್ನು ಗುರುತಿಸಿ, ಆತನ ವಿರುದ್ಧ ಕೇಸ್ ದಾಖಲಿಸಬೇಕು. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

‘ಓಂ ಶ್ರೀ ಮಹಾಲಕ್ಷ್ಮ್ಯೈ ನಮಃ’ ಬಗ್ಗೆ ಆಕ್ಷೇಪ

‘ಓಂ ಶ್ರೀ ಮಹಾಲಕ್ಷ್ಮ್ಯೈ ನಮಃ’ ಎಂಬುದು ದೇವಿ ಲಕ್ಷ್ಮಿಯನ್ನು ಸ್ತುತಿಸುವ ಪವಿತ್ರ ಮಂತ್ರ. ಇದನ್ನು ಕಾಲಿನ ಮೇಲೆ ಟ್ಯಾಟೂ ಹಾಕಿರುವುದು ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಬಹುದು ಎಂದು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.

ಈ ರೀತಿಯ ವಿವಾದ ಇದೇ ಮೊದಲಲ್ಲ

ವಿದೇಶಿ ಪ್ರವಾಸಿಗರಿಗೆ ಸಂಬಂಧಿಸಿದ ಇಂತಹ ವಿವಾದಗಳು ಈ ಹಿಂದೆ ಕೂಡ ನಡೆದಿವೆ. 2025ರ ಅಕ್ಟೋಬರ್‌ನಲ್ಲಿ ರಿಷಿಕೇಶದ ಪ್ರಸಿದ್ಧ ಲಕ್ಷ್ಮಣ ಝೂಲಾ ಬಳಿ ವಿದೇಶಿ ಪ್ರವಾಸಿಗೆಯೊಬ್ಬರು ಬಿಕಿನಿ ಧರಿಸಿ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.

ಇದನ್ನೂ ಓದಿ: ಕಸ ಕಂಡ್ರೆ ಸಾಕು, ಕ್ಲೀನ್ ಮಾಡೋದೇ ಕೆಲಸ; ಗುರ್ಗಾಂವ್‌ನಲ್ಲಿ 2,435 ಕೆಜಿ ತ್ಯಾಜ್ಯ ತೆರವು ಮಾಡಿದ ‘ಬಿಟ್ಟು ತಬಾಹಿ’! | Bittu Tabahi

ಆ ಘಟನೆಯ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ನಡೆದಿತ್ತು. ಗಂಗಾ ನದಿಯನ್ನು ಪವಿತ್ರವೆಂದು ಪರಿಗಣಿಸುವ ಜನರ ಧಾರ್ಮಿಕ ಭಾವನೆಗಳಿಗೆ ಇದು ಅಗೌರವ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net