ಮನೆಕಳ್ಳರ ಬಂಧನ

Gubbi_Crime
Published on


ತುಮಕೂರು: ಗುಬ್ಬಿ ತಾಲೂಕಿನ ಚಿನ್ನಾಯಕನಪಾಳ್ಯದಲ್ಲಿ
ಬೀಗ ಹಾಕಿದ್ದ ಮನೆಗೆ ನುಗ್ಗಿ 1 ಲಕ್ಷ ರೂ. ನಗದು ಹಾಗೂ 6 ಲಕ್ಷ ರೂ. ಮೌಲ್ಯದ ಚಿನ್ನಭರಣ ದೋಚಿದ್ದ ಕಳ್ಳರನ್ನು ಸಿ.ಎಸ್.ಪುರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತುರುವೇಕೆರೆ ತಾಲೂಕು ಸೀಗೇಹಳ್ಳಿಯ ಟಿ.ಗಿರೀಶ(35), ಚಿನ್ನಾಯಕನಪಾಳ್ಯದ ಸಿ.ವಿ.ಗೋವಿಂದರಾಜ(28) ಬಂಧಿತ ಆರೋಪಿಗಳು. ವಿಚಾರಣೆ ವೇಳೆ ಆರೋಪಿಗಳು ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ದ್ವಿಚಕ್ರ ವಾಹನ ಕಳ್ಳತನ ಮಾಡಿರುವುದನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಏ.19ರಂದು ಮನೆ ದೋಚಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net