ಬಂಡೆ ತೆರವು ಮಾಡಿ

10kls1 bande
ಹೊರನಾಡು-ಬಲಿಗೆ ಮೂಲಕ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಪಾಯಕಾರಿಯಾಗಿರುವ ಬಂಡೆಗಳು.
Published on

ಕಳಸ: ತಾಲೂಕಿನ ಹೊರನಾಡು-ಬಲಿಗೆ ಸಂಪರ್ಕ ರಸ್ತೆಯ ಮೇಲು ಮಂಚಿಗೆ ಬಳಿ ರಸ್ತೆಗೆ ಜಾರುವ ಸ್ಥಿತಿಯಲ್ಲಿರುವ ಬಂಡೆಗಳನ್ನು ತೆರವು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಳೆದ ಮಳೆಗಾಲದಲ್ಲಿ ಈ ಬಂಡೆಗಳು ರಸ್ತೆಯಂಚಿಗೆ ಜಾರಿದ್ದರಿಂದ ಕೆಲವು ದಿನ ಇಲ್ಲಿ ರಸ್ತೆ ಸಂಪರ್ಕ ಕಡಿದುಹೋಗಿತ್ತು. ಈ ವರ್ಷ ಮಳೆಗಾಲಕ್ಕೂ ಮುನ್ನ ಬಂಡೆಗಳನ್ನು ತೆರವು ಮಾಡಬೇಕು. ಇಲ್ಲದಿದ್ದರೆ ಮಳೆಗಾಲದಲ್ಲಿ ಮತ್ತೆ ರಸ್ತೆ ಸಂಪರ್ಕ ಕಡಿತವಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಹೊರನಾಡು-ಬಲಿಗೆ ಮೂಲಕ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪ್ರವಾಸಿ ವಾಹನ ಸಂಚಾರ ಹೆಚ್ಚಿರುತ್ತದೆ. ಮಳೆಗಾಲದಲ್ಲಿ ಬಂಡೆಗಳು ಜಾರಿದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಮಳೆಗಾಲ ಮುಗಿದ ಕೂಡಲೇ ಬಂಡೆ ತೆರವು ಮಾಡಿ, ಆ ಸ್ಥಳದಲ್ಲಿ ತಡೆಗೋಡೆ ನಿರ್ಮಿಸುವಂತೆ ಒತ್ತಾಯಿಸಿದ್ದೆವು. ಆದರೆ ಅನುದಾನ ಇಲ್ಲ ಎಂದು ಮುಂದೂಡಿದರು. ಈಗಲಾದರೂ ಕ್ರಮ ಕೈಗೊಳ್ಳಬೇಕು. ಅತಿವೃಷ್ಟಿ ನಿಧಿಯಿಂದ ತುರ್ತಾಗಿ ಹಣ ಮಂಜೂರು ಮಾಡಿ ಈ ಕಾಮಗಾರಿ ನಡೆಸಬೇಕು. ಮಳೆಗಾಲಕ್ಕೂ ಮುನ್ನ ಈ ಕೆಲಸ ಮುಗಿಯದಿದ್ದರೆ ಶಾಲಾ ಮಕ್ಕಳು, ಗ್ರಾಮಸ್ಥರಿಗೆ ತೊಂದರೆಯಾಗುತ್ತದೆ ಎಂದು ರೈತ ಸಂಘದ ಸವಿಂಜಯ ಜೈನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net