

ಮೂಡಿಗೆರೆ: ನೀರು ಅಮೂಲ್ಯವಾದ ಜೀವದ್ರವ. ಪ್ರಕೃತಿದತ್ತವಾಗಿ ಬಂದ ಕೊಡುಗೆ. ನೀರಿನ ಸಂರಕ್ಷಣೆ ಮತ್ತು ಮಿತವಾದ ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಶ್ವ ಜಲ ದಿನ ಆಚರಣೆ ಮಾಡಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‌ಗೌಡ ಹೇಳಿದರು.
ವಿಶ್ವ ಜಲದಿನದ ಮಹತ್ವ ಮತ್ತು ನೀರಿನ ಸಂರಕ್ಷಣೆ ಕಾನೂನು ಅರಿವು ನೀಡುವ ಕುರಿತಂತೆ ಕರಪತ್ರವನ್ನು ಗುರುವಾರ ಬಿಡುಗಡೆ ಮಾಡಿ ಮಾತನಾಡಿ, ನೀರನ್ನು ಪೋಲು ಮಾಡದಂತೆ ತಡೆಯಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ವಿನೋದ್‌ಕುಮಾರ್ ಮಾತನಾಡಿ, ಸಾರ್ವಜನಿಕರಿಗೆ ನೀರಿನ ಮಿತ ಬಳಕೆ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ವಿಎಂಪಿಎಂ ಟ್ರಸ್ಟ್ ಅಧ್ಯಕ್ಷ ವಿ.ಪಿ.ನಾರಾಯಣ್ ಮಾತನಾಡಿ, ಮಾ.21ರ ಬೆಳಗ್ಗೆ 11ಕ್ಕೆ ವಿಶ್ವ ಜಲ ಸಂರಕ್ಷಣಾ ದಿನಾಚರಣೆಯನ್ನು ವಿಎಂಪಿಎಂ ಟ್ರಸ್ಟ್‌ನಿಂದ ಪಪಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ಅಧ್ಯಕ್ಷ ಎಂ.ಎಸ್.ನಾಗರಾಜ್, ಸುಗ್ರಾಮ ಸಂಯೋಜಕ ನವೀನ್ ಆನೆದಿಬ್ಬ, ಕಸಾಪ ಜಿಲ್ಲಾ ಸದಸ್ಯ ಶಾಂತಕುಮಾರ್, ಕಾಫಿನಾಡು ಸಮಾಜ ಸೇವಾ ಸಂಘ ಅಧ್ಯಕ್ಷ ಹಸೈನಾರ್, ಪಪಂ ಅಧಿಕಾರಿ ಕಾಂತರಾಜ್, ವಿಜಯಲಕ್ಷ್ಮೀ, ಎಂ.ಬಿ.ಕಾರ್ತಿಕ್, ಎಚ್.ವಿ.ಮಹೇಶ್, ಪಿ.ಕೆ.ಲೋಕೇಶ್ ಇತರರಿದ್ದರು.