ನವಜಾತ ಶಿಶು ಪತ್ತೆ

Published on

ಬಾಗಲಕೋಟೆ: ನವಜಾತ ಗಂಡು ಶಿಶುವೊಂದು ಪತ್ತೆಯಾಗಿರುವ ಘಟನೆ ನಗರದ ಶಿರೂರ ಅಗಸಿ ಸಮೀಪ ಮಂಗಳವಾರ ನಡೆದಿದೆ.
ಶಿರೂರ ಅಗಸಿಯ ಶಿರೂರ ಅಗಸಿ ಬಳಿಯ ಚರಂಡಿಯಲ್ಲಿ ನವಜಾತ ಶಿಶು ಮೃತಪಟ್ಟ ಸ್ಥಿತಿ ಪತ್ತೆಯಾಗಿದೆ. ಜೀವಂತ ಶಿಶು ಎಸೆದಿದಿದ್ದಾರ ಅಥವಾ ಸಾವನ್ನಪ್ಪಿದ ಬಳಿಕ ಎಸೆದಿದ್ದರಾ ಎಂಬುದು ತಿಳಿದುಬಂದಿಲ್ಲ. ಅಂದಾಜು ಒಂದು ದಿನದ ನವಜಾತ ಶಿಶು. ಅವಧಿ ಪೂರ್ವ ಜನಿಸಿದ ಶಿಶುವಾಗಿದ್ದು, ಸ್ಥಳಕ್ಕೆ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ ನೀಡಿದರು. ಚರಂಡಿಯಲ್ಲಿ ಶಿಶು ಕಂಡು ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net