ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ನಗರ ಠಾಣಾ ಸರಹದ್ದಿನಲ್ಲಿ ೨೦೧೮ನೇ ಸಾಲಿನಲ್ಲಿ ೮ ಮನೆಗಳಲ್ಲಿ ಕಳುವು ಮಾಡಿದ್ದ ಪ್ರಕರಣಗಳಲ್ಲಿ ಆರೋಪಿಯೊಬ್ಬನನ್ನು ಕೋಲಾರ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಸಂತೋಷ್ (೩೮) ಎನ್ನಲಾಗಿದೆ. ಹಾಸನ ಜಿಲ್ಲೆ ಹಾಲೂರು ತಾಲ್ಲೂಕಿನ ಮಧುಗಿರಿ ಗ್ರಾಮದವನಾಗಿದ್ದು, ಆ.೧ ರಂದು ಹಾಸನ ಜಿಲ್ಲೆಯ ಸಕಲೇಶ್ವರ ನಗರದ ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಆರೋಪಿಯನ್ನು ಕೋಲಾರ ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
೨೦೧೮ರಲ್ಲಿ ನಗರದ ೮ ಮನೆಗಳಲ್ಲಿ ಕಳ್ಳತನ ಮಾಡಿ ಆರೋಪಿ ಪರಾರಿಯಾಗಿದ್ದ. ಈ ಸಂಬAಧ ನಗರ ಠಾಣೆಯಲ್ಲಿ ೮ ಕಳುವು ಪ್ರಕರಣಗಳು ದಾಖಲಾಗಿದ್ದವು. ಕೋಲಾರ ನಗರ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಸದಾನಂದ ಮತ್ತು ಅವರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರ ೦೩ ಕೆ.ಎಲ್.ಆರ್. ೦೬ : ಕೋಲಾರ ನಗರದ ಕಳುವು ಪ್ರಕರಣಗಳಲ್ಲಿ ಬಂಧಿತ ಆರೋಪಿ ಸಂತೋಷ್ ಭಾವಚಿತ್ರ