

ಕಡೂರು: ತಾಲೂಕಿನ ಚೌಳಹಿರಿಯೂರಿನಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಗಿರಿಯಾಪುರದ ಶ್ರೀ ಗುರುಕೃಪಾ ಪ್ರೌಢಶಾಲೆ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆ ಮುಖ್ಯಶಿಕ್ಷಕ ಎಂ.ಧರಣೇಂದ್ರಮೂರ್ತಿ ತಿಳಿಸಿದ್ದಾರೆ. ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದಲ್ಲಿ ಖೋ-ಖೋ, ಕಬಡ್ಡಿ, ವಾಲಿಬಾಲ್, ಥ್ರೋಬಾಲ್ ಮತ್ತು ಬಾಲ್ ಬಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕಿಯರ ವಿಭಾಗದ ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ 100 ಮೀ. ಓಟದ ಸ್ಪರ್ಧೆಯಲ್ಲಿ ಆರ್. ಮನೋಜ್ (ಪ್ರಥಮ), 200 ಮೀ. ಓಟದಲ್ಲಿ ಸಿ.ಎನ್. ವಿಕಾಸ್(ಪ್ರಥಮ), 400 ಮೀ. ಓಟದಲ್ಲಿ ಬಿ.ಎ.ಉಲ್ಲಾಸ್ ಮತ್ತು 800 ಮೀ. ಓಟದಲ್ಲಿ ನಿತಿನ್ (ದ್ವಿತೀಯ ಸ್ಥಾನ), ವಾಕ್ ರೇಸ್‌ನಲ್ಲಿ ಮದನ್ ಮೌರ್ಯ (ಪ್ರಥಮ) ಹಾಗೂ ಜೆ.ಡಿ.ಹಿತ 100 ಮೀ. ಮತ್ತು 200 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮಕ್ಕಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಎಂ.ಬಿ.ಚಿದಾನಂದ, ಎ.ಪಿ.ಕರ್ಣ, ಟಿ.ಮಹೇಶ್ವರಪ್ಪ, ಬಿ.ಆರ್.ಕೋಮಲ್ ತರಬೇತಿ ನೀಡಿದ್ದರು.