

Zebra : ಆಗಾಗ ಕಾಡುಪ್ರಾಣಿಗಳು ಅರಣ್ಯ ಬಿಟ್ಟು ಆಹಾರ ಹರಿಸಿ ಅಥವಾ ದಾರಿ ತಪ್ಪಿ ನಾಡಿಗೆ ಬರುವುದು ಸಾಮಾನ್ಯ. ಆದರೆ, ಇಲ್ಲೊಂದು ಸಾಕು ಜೀಬ್ರಾ ಊರಿಂದ ಕಾಣೆಯಾಗಿ ಕಾಡಿಗೆ ಹೋಗಿದೆ. ಅದನ್ನು ಹುಡುಕಿಕೊಡುವಂತೆ ಮಾಲೀಕಕರು ಕಂಪ್ಲೇಟ್ ಮಾಡಿದ ಒಂದು ವಾರದ ಬಳಿಕ ಕಾಡಿನಿಂದ ಮನೆಗೆ ನೇರವಾಗಿ ಹೆಲಿಕ್ಯಾಪ್ಟರ್ ಮೂಲಕ ಈ ಜೀಬ್ರಾವನ್ನು ಸಾಗಿಸಿದ ಘಟನೆ ಟೆನ್ನೆಸ್ಸೀಯಲ್ಲಿ ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ಟೆನ್ನೆಸ್ಸೀಯಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಅಲೆದಾಡುತ್ತಿದ್ದ ಮತ್ತು ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದ ಓಡಿಹೋದ ಸಾಕು ಜೀಬ್ರಾವನ್ನು ಭಾನುವಾರ ಸೆರೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಡ್ ಎಂಬ ಹೆಸರಿನ ಜೀಬ್ರಾಮೇ.30 ರಂದು ಕ್ರಿಸ್ಟಿಯಾನಗೆ ಬಂದಿದೆ. ಮರುದಿನ ಅವರ ಮಾಲೀಕರು ಅವರು ಕಾಣೆಯಾಗಿದ್ದಾರೆ ದೂರು ನೀಡಿದ್ದಾರೆ. ಸೆಂಟ್ರಲ್ ಟೆನ್ನೆಸ್ಸೀಯಲ್ಲಿರುವ ಕ್ರಿಸ್ಟಿಯಾನಾ ಸಮುದಾಯದ ಉಪವಿಭಾಗದ ಬಳಿಯ ಹುಲ್ಲುಗಾವಲಿನಲ್ಲಿ ಪತ್ತೆಯಾದ ನಂತರ ಎಡ್ ಜೀಬ್ರಾವನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು. ಅಲ್ಲಿಂದ ಮಾಲೀಕರ ಮನೆಗೆ ಹೆಲಿಕ್ಯಾಪ್ಟರ್ ಮೂಲಕ ಸಾಗಿಸಲಾಯಿತು ಎಂದು ರುದರ್‌ಫೋರ್ಡ್ ಕೌಂಟಿ ಶೆರಿಫ್ ಕಚೇರಿ ದೃಢಪಡಿಸಿದೆ.
ಎಡ್ ನೆರೆಹೊರೆಯಲ್ಲಿ ಓಡಾಡುತ್ತಿರುವುದನ್ನು ಚಿತ್ರೀಕರಿಸಿದ ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ದೃಶ್ಯಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಈ ಜೀಬ್ರಾವನ್ನು ಟ್ರೋಲ್ ಹಾಗೂ ಮಿಮ್ಸ್ಗೆ ಬಳಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಈ ಎಡ್ ಸೆರೆ ಸಿಕ್ಕಿದೆ. ಆದರೆ, ಜೀಬ್ರಾವನ್ನು ಹಿಡಿಯಲು ವಿಮಾನ ಏಕೆ ಬಳಸಲಾಯಿತು ಎಂದು ಹೇಳಲಾಗಿಲ್ಲ.(ಏಜೆನ್ಸೀಸ್)