ರಶ್ಮಿಕಾ ಡೀಪ್‌ ಫೇಕ್ ವೀಡಿಯೋ ನೋಡಿ ವಿಚಲಿತಳಾಗಿದ್ದೇಕೆ ಜಾರಾ ಪಟೇಲ್?

rashmika
Published on

ಮುಂಬೈ: "ನಾನು ತೀವ್ರವಾಗಿ ವಿಚಲಿತಳಾಗಿದ್ದೇನೆ" ಎಂದು ವೈರಲ್ ಆಗಿರುವ ರಶ್ಮಿಕಾ ಮಂದಣ್ಣ ಡೀಪ್‌ ಫೇಕ್ ವೀಡಿಯೋದಲ್ಲಿ ನೈಜ ಹುಡುಗಿ ಜಾರಾ ಪಟೇಲ್ ಪ್ರತಿಕ್ರಿಯಿಸಿದ್ದಾರೆ.

ತನ್ನ ಇನ್​ಸ್ಟಾಗ್ರಾಮ್​ ಪೇಜ್​ನಲ್ಲಿ ಟ್ವೀಟ್​ ಹಾಕಿರುವ ಜರಾ ಪಟೇಲ್, ಈ ರೀತಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಇದು ನನಗೆ ತುಂಬಾ ಅಸಮಾಧಾನ ತಂದಿದೆ ಎಂದು ಆಂಗ್ಲೋ ಇಂಡಿಯನ್​ ಮಹಿಳೆ ಇನ್​ಸ್ಟಾಗ್ರಾಮ್​ನಲ್ಲಿ ಹೇಳಿಕೆಯನ್ನು ಹಂಚಿಕೊಂಡಿದ್ದು, ಈ ವೀಡಿಯೊ ತಯಾರಿಕೆಯಲ್ಲಿ ತನ್ನ ಕೊಡುಗೆ ಇಲ್ಲ ಎಂದು ಬಹಿರಂಗಪಡಿಸಿದ್ದಾರೆ.

"ಎಲ್ಲರಿಗೂ ನಮಸ್ಕಾರ, ನನ್ನ ದೇಹ ಮತ್ತು ಬಾಲಿವುಡ್‌ನ ಜನಪ್ರಿಯ ನಟಿಯ ಮುಖವನ್ನು ಬಳಸಿಕೊಂಡು ಯಾರೋ ಒಬ್ಬರು ಡೀಪ್‌ಫೇಕ್ ವೀಡಿಯೊವನ್ನು ರಚಿಸಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಡೀಪ್‌ಫೇಕ್ ವೀಡಿಯೊದೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ಹಾಗೆಯೇ ಏನಾಗುತ್ತಿದೆ ಎಂಬುದರ ಬಗ್ಗೆ ನಾನು ತೀವ್ರವಾಗಿ ವಿಚಲಿತನಾಗಿದ್ದೇನೆ ಮತ್ತು ಅಸಮಾಧಾನಗೊಂಡಿದ್ದೇನೆ" ಎಂದು ಆಕೆ ಹೇಳಿದ್ದಾರೆ.

"ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಬಗ್ಗೆ ಮಹಿಳೆಯರು ಈಗ ಇನ್ನಷ್ಟು ಭಯಪಡಬೇಕಾದ ಪರಿಸ್ಥಿತಿ ಇದೆ. ಹುಡುಗಿಯರ ಭವಿಷ್ಯದ ಬಗ್ಗೆ ನಾನು ಚಿಂತೆ ಮಾಡುತ್ತೇನೆ. ದಯವಿಟ್ಟು ಇಂಟರ್ ನೆಟ್‌ನಲ್ಲಿ ನೀವು ನೋಡುವ ಸಂಗತಿಗಳನ್ನು ಪರಿಶೀಲಿಸಿ. ಅದರಲ್ಲಿನ ಎಲ್ಲವೂ ನಿಜವಲ್ಲ" ಎಂದು ಜಾರಾ ಪಟೇಲ್ ಟ್ವೀಟ್​ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅವರು ಲಿಫ್ಟ್‌ಗೆ ಪ್ರವೇಶಿಸುತ್ತಿರುವುದನ್ನು ತೋರಿಸುವ ಡೀಪ್‌ಫೇಕ್ ವೀಡಿಯೊ ಇತ್ತೀಚೆಗೆ ವೈರಲ್ ಆಗಿತ್ತು. ಇದಕ್ಕೆ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಕೂಡ ಅಸಮಾದಾನ ವ್ಯಕ್ತಪಡಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net