ನೀಲಿ ಉಡುಗೆಯಲ್ಲಿ ಕಾಣಿಸಿಕೊಂಡ ಸಮಂತಾ ಹಾಟ್​ ಲುಕ್​ಗೆ ಅಭಿಮಾನಿಗಳು ಫಿದಾ…

samanantha
Published on

ನವ ದೆಹಲಿ: ದಕ್ಷಿಣ ಸಿನಿ ಇಂಡಸ್ಟ್ರಿಯ ಖ್ಯಾತ ನಟಿ ಸಮಂತಾ ಇತ್ತೀಚಿನ ದಿನಗಳಲ್ಲಿ ನಟನೆಯಿಂದ ದೂರವಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲವು ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಆಕೆ ನೀಲಿ ಆಫ್ ಶೋಲ್ಡರ್ ಡ್ರೆಸ್‌ನಲ್ಲಿ ತುಂಬಾ ಹಾಟ್ ಆಗಿ ಕಾಣುತ್ತಿದ್ದಾರೆ.

ಸಮಂತಾ ತನ್ನ ಹಾಟ್ ಮತ್ತು ಬೋಲ್ಡ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನೀಲಿ ಬಣ್ಣದ ಜತೆಗೆ ಕುತ್ತಿಗೆಗೆ ಸರಳವಾದ ಪೆಂಡೆಂಟ್ ಧರಿಸಿದ್ದು, ಇಳಿ ಬಿಟ್ಟ ತಲೆ ಕೂದಲು ಮತ್ತು ಸ್ಮೋಕಿ ಮೇಕ್ಅಪ್ ನೋಡುಗರ ಕಣ್ಣು ಕುಕ್ಕುವಂತಿದೆ.

‘ಖುಷಿ’ ನಟಿ ಈ ಫೋಟೋಗಳನ್ನು ಹಂಚಿಕೊಳ್ಳುವಾಗ, 'ಲೈಟಿಂಗ್​ ಅಪ್​ ದ ಫೆಸ್ಟೀವ್​ ಸೀಸನ್​ ವಿತ್​ ಬೋಲ್ಡ್​ ಅಂಡ್​ ಬ್ಯೂಟಿಫುಲ್​' ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಸಮಂತಾ ಹಾಟ್​ ಫೋಟೋಗಳನ್ನು ನೋಡಿದ ಅವರ ಹಲವು ಅಭಿಮಾನಿಗಳು ಶ್ಲಾಘಿಸಿದ್ದಾರೆ. ಒಬ್ಬ ನೆಟ್ಟಿಗ 'ಎಷ್ಟು ಸುಂದರವಾಗಿದೆ, ತುಂಬಾ ಸೊಗಸಾಗಿ ಕಾಣುವುದು ವಾವ್' ಎಂದು ಬರೆದಿದ್ದಾನೆ. ಇನ್ನೊಬ್ಬ 'ಗಾರ್ಜಿಯಸ್' ಎಂದು ಬರೆದಿದ್ದಾನೆ.

ಬ್ರೇಕ್ ತೆಗೆದುಕೊಂಡಿದ್ದು ಯಾಕೆ?: ಸಮಂತಾ ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದೇ ಕಾರಣಕ್ಕೆ ಕಳೆದ ವರ್ಷ ನಟನೆಯಿಂದ ವಿರಾಮ ತೆಗೆದುಕೊಂಡರು. ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ರೊಮ್ಯಾಂಟಿಕ್ ಚಿತ್ರ 'ಖುಷಿ'. ಯಲ್ಲಿ. ವಿಜಯ್ ದೇವರಕೊಂಡ ಕೂಡ ಮುಖ್ಯ ಭೂಮಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net