ಯುವರಾಜ್ ಗೆ ಕೊಟ್ಟಿರೊ ಕಾರು ನಂದು ಎಂದ ಸುರೇಶ್ ಬಾಬು

SureshBabu1
Published on

ಚಿಕ್ಕನಾಯಕನಹಳ್ಳಿ : ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ವಂಚಕ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮಿ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು ಹೆಸರು ಹರಿದಾಡುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.

ವಂಚಕ ಯುವರಾಜ್ ಬಳಿಯಿಂದ ಸಿಸಿಬಿ ಜಫ್ತಿ ಮಾಡಿರುವ ಎರಡು ಐಷಾರಾಮಿ ಕಾರುಗಳ ಪೈಕಿ ರೇಂಜ್ ರೋವರ್ ಕಾರು ಸುರೇಶ್‌ಬಾಬು ಹೆಸರಿನಲ್ಲಿದ್ದು ಯುವರಾಜ್‌ಗೆ ರಾಜಕಾರಣಿಗಳ ಜತೆ ನಂಟು ಇರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿದೆ. 75 ಲಕ್ಷ ರೂ.,ಗೆ ಸುರೇಶ್‌ಬಾಬು ಬಳಿಯಿಂದ ಕಾರನ್ನುಖರೀದಿಸಿರುವ ಯುವರಾಜ್ ಈವರೆಗೆ ತನ್ನ ಹೆಸರಿಗೆ ಮಾಲೀಕತ್ವ ಬದಲಿಸಿಕೊಂಡಿಲ್ಲ.

75 ಲಕ್ಷ ರೂ., ಚೆಕ್ !: ಒಂದೂವರೆ ಕೋಟಿ ರೂ., ಮೌಲ್ಯದ 2019ರ ಮಾಡೆಲ್ ರೇಂಜ್ ರೋವರ್ ಸ್ಪೋರ್ಟ್ ಡೀಸೆಲ್ ಕಾರನ್ನು ಕಳೆದ ವರ್ಷ 75 ಲಕ್ಷ ರೂ.,ಗೆ ಯುವರಾಜ್ ಖರೀದಿಸಿದ್ದರು. 75 ಲಕ್ಷ ರೂ., ಅನ್ನು ಚೆಕ್ ರೂಪದಲ್ಲಿ ನೀಡಿದ್ದು ಆ ಚೆಕ್ ದಾಖಲೆಗಳನ್ನು ಸುರೇಶ್‌ಬಾಬು ಇನ್ನೂ ಇಟ್ಟಿದ್ದಾರೆ. ಡಿಲಿವರಿನೋಟ್‌ಗೆ ಸಹ ಸುರೇಶ್‌ಬಾಬು ಸಹಿಹಾಕಿದ್ದಾರೆ. ಆದರೆ, ಈವರೆಗೆ ಯುವರಾಜ್ ತನ್ನ ಹೆಸರಿಗೆ ಕಾರನ್ನು ಮಾಡಿಸಿಕೊಂಡದೇ ಇರುವುದು ಹಲವು ಅನುಮಾನಿಗಳಿಗೆ ಎಡೆಮಾಡಿಕೊಟ್ಟಿದೆ.

ಕಾರು ಖರೀದಿಸುವ ವೇಳೆ 50 ಲಕ್ಷ ರೂ., ಬ್ಯಾಂಕ್ ಸಾಲ ಪಡೆಯಲಾಗಿತ್ತು. ಕರೊನಾ ಸಂದರ್ಭದಲ್ಲಿ ಯುವರಾಜ್ ಸಾಲದ ಕಂತುಕಟ್ಟಲಿಲ್ಲವೆಂಬುದು ತಿಳಿದುಬಂದಿದೆ. ಅವರಿಗೆ ಕಾರು ಮಾರಿರುವ ಸಂಬಂಧದ ಎಲ್ಲಾ ವ್ಯವಹಾರ ಪತ್ರಗಳು ನನ್ನ ಬಳಿ ಇದ್ದು ಅದನ್ನು ಸಿಸಿಬಿನವರಿಗೆ ತಲುಪಿಸಿದ್ದಾನೆ. ಕಾರಿನ ಮಾರಾಟ ವ್ಯಾವಹಾರಿಕ ಸಂಬಂಧ ಹೊರತುಪಡಿಸಿ ನನಗೂ ಆತನಿಗೂ ಯಾವುದೇ ಬೇರೆ ರೀತಿಯ ಸಂಬಂಧವಿಲ್ಲ ಎಂದು ಸುರೇಶ್‌ಬಾಬು ‘ವಿಜಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net