ಅಸಂಬದ್ಧ ಪ್ರಶ್ನೆ ಕೇಳಿದ ಯೂಟ್ಯೂಬರ್​ನನ್ನು ಹಿಗ್ಗಾಮುಗ್ಗಾ ಥಳಿಸಿದ ನಾಗಾಸಾಧು; Video Viral

Nagasadhu Attack
Published on

ಪ್ರಯಾಗ್​ರಾಜ್​: ವಿಶ್ವದ ಅತ್ಯಂತ ಪ್ರಸಿದ್ಧ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಮಾಹಕುಂಭ ಮೇಳವು ಜನವರಿ 13ರಂದು ಪ್ರಾರಂಭಗೊಂಡಿದ್ದು, ದೇಶ-ವಿದೇಶದಿಂದ ಭಕ್ತ ಸಾಗರವೇ ಹರಿದು ಬರುತ್ತಿದೆ ಎಂದರೆ ತಪ್ಪಾಗಲಾರದು. ಲಕ್ಷಾಂತರ ಸಂಖ್ಯೆಯ ನಾಗ ಸಾಧುಗಳು, ಸಾಧು ಸಂತರುಗಳು ಕೂಡಾ ಆಗಮಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಇದೀಗ ನಾಗಾಸಾಧು ಒಬ್ಬರು ಯೂಟ್ಯೂಬರ್​ನನ್ನು ಹೊಡೆದು ಓಡಿಸಿರುವ ಘಟನೆ ಮಹಾಕುಂಭಮೇಳದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಖತ್ ವೈರಲ್​ (Video Viral) ಆಗಿದೆ. ಅನೇಕರು ನಾಗಾಸಾಧುವಿನ ನಡೆಯನ್ನು ಮೆಚ್ಚಿ ಕಮೆಂಟ್​ ಹಾಕುತ್ತಿದ್ದಾರೆ.

ವೈರಲ್​ ಆಗಿರುವ ವಿಡಿಯೋ (Video Viral) ನೋಡುವುದಾದರೆ ಧ್ಯಾನ ಮಾಡುತ್ತಿರುವ ನಾಗಾಸಾಧು ಒಬ್ಬರ ಬಳಿ ಬಂದು ಯೂಟ್ಯೂಬರ್​ ಬಾಬಾ ನೀವು ಯಾವಾಗ ಸನ್ಯಾಸಿ ಪಂಥವನ್ನು ಸೇರಿದ್ದೀರಿ ಎಂಬ ಪ್ರಶ್ನೆಯನ್ನು ಕೇಳುತ್ತಾನೆ. ಮೊದಲಿಗೆ ಶಾಂತವಾಗಿಯೇ ಆತನ ಪ್ರಶ್ನೆಗಳಿಗೆ ಉತ್ತರಿಸಿದ ನಾಗಾಸಾದು ಆ ಬಳಿಕ ಆತನ ಅಸಂಬದ್ಧ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಲ್ಲಿಂದ ಹೊಡೆದು ಓಡಿಸಿದ್ದಾರೆ.

ಜನತಾ ದರ್ಬಾರ್​ 123 ಎಂಬ ಇನ್ಸ್​​ಟಾಗ್ರಾಮ್​ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಈವರೆಗೂ 20.9 ಮಿಲಿಯನ್​ಗೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಅನೇಕರು ನಾಗಾಸಾಧುವಿನ ನಡೆಯನ್ನು ಮೆಚ್ಚಿದ್ದು, ಆತನಿಗೆ ಹೀಗೆಯೇ ಆಗಬೇಕಿತ್ತು ಎಂದು ಕಮೆಂಟ್​ ಹಾಕಿ ಯೂಟ್ಯೂಬರ್​ನ ವಿರುದ್ಧ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net