ಕಳೆದ 3 ವರ್ಷದಲ್ಲಿ ಭಾರತದ ಕಂಟೆಂಟ್​ ಕ್ರಿಯೇಟರ್ಸ್​ಗೆ ಯೂಟ್ಯೂಬ್​ ಪಾವತಿಸಿದ ಒಟ್ಟು ಹಣ ಕೇಳಿದ್ರೆ ದಂಗಾಗ್ತೀರಾ! YouTube

YouTube
Published on

YouTube : ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿರುವ ಈ ಯುಗದಲ್ಲಿ, ಅನೇಕರು ಸ್ವಂತವಾಗಿ ಹಣ ಗಳಿಸುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಹೂಡಿಕೆ ಇಲ್ಲದೆ ಹಣ ಗಳಿಸಲು ಯೂಟ್ಯೂಬ್ ಉತ್ತಮ ವೇದಿಕೆಯಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು, ವಯಸ್ಸಿನ ಮಿತಿಯಿಲ್ಲದೇ ಯುವಕರು ಮತ್ತು ಹಿರಿಯರು ಯೂಟ್ಯೂಬ್ ಚಾನೆಲ್‌ಗಳನ್ನು ಪ್ರಾರಂಭಿಸುತ್ತಿದ್ದಾರೆ ಮತ್ತು ಆರ್ಥಿಕವಾಗಿ ಬಲಿಷ್ಠರಾಗುತ್ತಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಯೂಟ್ಯೂಬ್ ಮೂಲಕ ಕಂಟೆಂಟ್​ ಕ್ರಿಯೇಟರ್ಸ್​ ಎಷ್ಟು ಸಂಪಾದಿಸಿದ್ದಾರೆ ಎಂಬುದನ್ನು ಸಿಇಒ ನೀಲ್ ಮೋಹನ್ ಇದೀಗ ಬಹಿರಂಗಪಡಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ, ಭಾರತೀಯ ಕಂಟೆಂಟ್​ ಕ್ರಿಯೇಟರ್ಸ್​, ಮಾಧ್ಯಮ ಸಂಸ್ಥೆಗಳು ಸೇರಿದಂತೆ ಇತ್ಯಾದಿಗಳಿಗೆ ಯೂಟ್ಯೂಬ್ ಕಂಪನಿ 21,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಪಾವತಿಸಿದೆ. ಮುಂಬೈನಲ್ಲಿ ನಡೆದ ವಿಶ್ವ ಆಡಿಯೋ ವಿಷುಯಲ್ ಮತ್ತು ಮನರಂಜನಾ ಶೃಂಗಸಭೆಯಲ್ಲಿ (ವೇವ್ಸ್) ಸಿಇಒ ನೀಲ್ ಮೋಹನ್ ಇದನ್ನು ಸ್ಪಷ್ಟಪಡಿಸಿದರು.

ಇದಿಷ್ಟೇ ಅಲ್ಲದೆ, ಕಂಟೆಂಟ್​ ಕ್ರಿಯೇಟರ್ಸ್​ ಅನ್ನು ಉತ್ತೇಜಿಸಲು ಮುಂದಿನ ಎರಡು ವರ್ಷಗಳಲ್ಲಿ ಯೂಟ್ಯೂಬ್ 850 ಕೋಟಿ ರೂ.ಗಳ ಹೂಡಿಕೆಯನ್ನು ಘೋಷಿಸಿತು. ಈ ಹೂಡಿಕೆಯು ನಿರ್ದಿಷ್ಟವಾಗಿ ಭಾರತೀಯ ಕಂಟೆಂಟ್​ ಕ್ರಿಯೇಟರ್ಸ್​ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

ಭಾರತದಲ್ಲಿ 100 ಮಿಲಿಯನ್‌ಗಿಂತಲೂ ಹೆಚ್ಚು ಯೂಟ್ಯೂಬ್ ಚಾನೆಲ್‌ಗಳು ಅಥವಾ ಯೂಟ್ಯೂಬರ್‌ಗಳು ಕಂಟೆಂಟ್​ಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಸುಮಾರು 15,000 ಯೂಟ್ಯೂಬರ್‌ಗಳು ಒಂದು ವರ್ಷದಲ್ಲಿ 1 ಮಿಲಿಯನ್ ಸಬ್​ಸ್ಕ್ರೈಬರ್ಸ್​ ಪಡೆಯುವ ದಾಖಲೆಯನ್ನು ಸಾಧಿಸಿದ್ದಾರೆ. 2005, ಫೆಬ್ರವರಿ 14ರಂದು ಪ್ರಾರಂಭವಾದ ಯೂಟ್ಯೂಬ್ ಇದೀಗ 20 ವರ್ಷಗಳನ್ನು ಪೂರೈಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net