

ತ್ರಿಸ್ಸೂರ್: ಹೇಳಿದ ಸಮಯಕ್ಕೆ ಎಬ್ಬಿಸದೇ ತಡವಾಗಿ ಎದ್ದೇಳಿಸಿದ್ದಕ್ಕೆ ಪಾಪಿ ಮಗನೊಬ್ಬ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಅಮಾನುಷ ಘಟನೆ ಕೇರಳದಲ್ಲಿ ನಡೆದಿದೆ.
ಮೃತ ತಂದೆಯನ್ನು ಕೊಡನ್ನೂರು ಅರಿಯಂಪದಂ ಮೂಲದ ಜಾಯ್ (60) ಎಂದು ಗುರುತಿಸಲಾಗಿದೆ. ಜಾಯ್ ಪುತ್ರ ಆರೋಪಿ ರಿಜೋ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ರಿಜೋ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ನಿನ್ನೆ (ಏ.7) 5 ಗಂಟೆಗೆ ಪಾನಮತ್ತ ಸ್ಥಿತಿಯಲ್ಲಿ ಮನೆಗೆ ತಲುಪಿದ. ಮಲಗಲು ಹೋಗುವ ಮುನ್ನ ರಾತ್ರಿ 8.30ಕ್ಕೆ ಏಳಿಸಿ ಎಂದು ಪಾಲಕರಿಗೆ ಹೇಳಿ ಹೋಗಿದ್ದ. ಆದರೆ, ತಡವಾಗಿ ಎಬ್ಬಿಸಿದ್ದಕ್ಕೆ ಪಾಲಕರ ಮೇಲೆ ಕೋಪ ಮಾಡಿಕೊಂಡು ಕೂಗಾಡಿದ್ದ.
ಮಗನನ್ನು ಜಾಯ್ ಪ್ರಶ್ನಿಸಿದಾಗ, ರಿಜೋ ಅವರ ಮೇಲೆ ಜೋರು ಧ್ವನಿ ಮಾಡಿ ಕೆಳಗೆ ತಳ್ಳಿದ್ದಾನೆ. ಕೆಳಗೆ ಬಿದ್ದ ಜಾಯ್, ಮೇಲೆ ಮಗ ಮಾರಣಾಂತಿಕವಾಗಿ ಹಲ್ಲೆ ಮಾಡಿದ. ಗಂಭೀರವಾಗಿ ಗಾಯಗೊಂಡಿದ್ದ ಜಾಯ್ರನ್ನು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದಾಗ್ಯೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. (ಏಜೆನ್ಸೀಸ್)