ನಾಗರಹಾವಿನ ಮುಂದೆ ಕೇಕ್ ಇಟ್ಟು 'ಹ್ಯಾಪಿ ಬರ್ತ್​ಡೇ' ಎಂದು ಪಂಚಮಿ ಆಚರಿಸಿದ ಯುವಕರ ದಂಡು!

Cobra F (1)
Published on

ಬೆಂಗಳೂರು: ನಾಗರಪಂಚಮಿಯ ದಿನದಂದು ಅಲ್ಲಲ್ಲಿ ನಾಗರಹಾವು ದರ್ಶನವಾಗುವುದು ಸಹಜ. ಅಂಥ ಕೆಲವು ಸನ್ನಿವೇಶ ಪ್ರತಿ ನಾಗರಪಂಚಮಿಯಂದು ಕಾಣಸಿಗುತ್ತದೆ. ಪಂಚಮಿಯ ಮುನ್ನ ದಿನವಾದ ನಿನ್ನೆ ವಿಧಾನಸೌಧದಲ್ಲೇ ನಾಗರಹಾವು ಕಾಣಿಸಿಕೊಂಡಿತ್ತು.

ಹೀಗೆ ನಾಗರಪಂಚಮಿ ದಿನ ಇಲ್ಲೊಂದು ಕಡೆ ಕೂಡ ನಾಗರಹಾವು ಕಾಣಿಸಿಕೊಂಡಿದೆ. ಅಷ್ಟೇ ಆಗಿದ್ದರೆ ಈ ವಿಷಯ ಅಂಥ ಗಮನ ಸೆಳೆದಿರುತ್ತಿರಲಿಲ್ಲ. ಆದರೆ ಇಲ್ಲೊಂದಷ್ಟು ಯುವಕರು ಈ ನಾಗರಹಾವಿನ ಮುಂದೆ ಕೇಕ್ ಇಟ್ಟು ಹ್ಯಾಪಿ ಬರ್ತ್​ಡೇ ಎಂದಿದ್ದಾರೆ. ಈ ಮೂಲಕ ಪಂಚಮಿಯನ್ನೂ ಬರ್ತ್​ಡೇ ರೀತಿ ಆಚರಿಸಿದ್ದಾರೆ.

ಬಯಲಿನಂಥ ಜಾಗದಲ್ಲಿ ಕಾಣಿಸಿಕೊಂಡ ನಾಗರಹಾವಿನ ಮುಂದೆ ಬರ್ತ್​ಡೇ ಕೇಕ್ ಇಟ್ಟ ಇವರು, 'ನಗುತ ನಗುತ ಬಾಳು ನೀನು ನೂರು ವರುಷ..' ಎಂಬ ಹಾಡನ್ನು ಹೇಳಿದ್ದು, ಅದರಲ್ಲೊಬ್ಬ ಹಾವಿನ ಹೆಡೆ ಮೇಲೆ ಕೈ ಇರಿಸಿ ಕೆಳಕ್ಕೆ ಅದುಮಿ ಕೇಕ್ ತಿನ್ನಿಸಲು ಯತ್ನಿಸಿದ್ದೂ ಚಿತ್ರೀಕರಣಗೊಂಡಿದೆ. ಈ ಕುರಿತ ವಿಡಿಯೋ ಈಗ ವೈರಲ್ ಆಗುತ್ತಿದೆ. ಈ ಘಟನೆ ಎಲ್ಲಿಯದ್ದು ಎನ್ನುವ ಕುರಿತು ಖಚಿತ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net