ಪಿಟಿ ಮೇಸ್ಟ್ರು ಕೈಕೊಟ್ಟಿದ್ದಕ್ಕೆ ಅಂಬೇಡ್ಕರ್​ ವಿರುದ್ಧ ನಾಲಿಗೆ ಹರಿಬಿಟ್ಟ ತುಮಕೂರಿನ ಯುವತಿ ಅರೆಸ್ಟ್​!

Young Woman
Published on

ತುಮಕೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ್​ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಯುವತಿಯನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.

ವೇದಾವತಿ (22) ಬಂಧಿತ ಯುವತಿ. ಈಕೆ ಕ್ಯಾತಸಂದ್ರ ಸಮೀಪದ ಕಲ್ಲಹಳ್ಳಿ ಗ್ರಾಮದ ನಿವಾಸಿ.‌ ನನಗೆ ಅನ್ಯಾಯವಾಗಿದೆ. ಇದಕ್ಕೆ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಕಾರಣ ಎನ್ನುತ್ತಾ ಅವಾಚ್ಯ ಶಬ್ದಗಳಿಂದ ಅಂಬೇಡ್ಕರ್​ ಅವರನ್ನು ನಿಂದಿಸಿ, ವಿಡಿಯೋ ಹರಿಬಿಟ್ಟಿದ್ದಳು.

ವಿಡಿಯೋ ವೈರಲ್​ ಆದ ಬಳಿಕ ವೇದಾವತಿ ವಿರುದ್ಧ ಎನ್.ಇ.ಪಿ.ಎಸ್ ಪೊಲೀಸ್ ಠಾಣೆಗೆ ಶ್ರೀನಿವಾಸ್​ ಎಂಬುವರು ದೂರು ನೀಡಿದ್ದರು. ಇದರ ಆಧಾರದ ಮೇಲೆ ವೇದಾವತಿಯನ್ನು ಬಂಧಿಸಲಾಗಿದೆ. ಪಿಟಿ ಮೇಷ್ಟ್ರು ಮೇಲಿನ ದ್ವೇಷಕ್ಕೆ ಅಂಬೇಡ್ಕರ್​ರನ್ನು ನಿಂದನೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಕೈಕೊಟ್ಟ ಪಿಟಿ ಮೇಷ್ಟ್ರು

9ನೇ ತರಗತಿ ಓದುತ್ತಿದ್ದಾಗ ವೇದಾವತಿ ತನ್ನ ಶಾಲೆಯ ದೈಹಿಕ ಶಿಕ್ಷಕನನ್ನು ಪ್ರೀತಿ ಮಾಡುತ್ತಿದ್ದಳು. ಆದರೆ, ದೈಹಿಕ ಶಿಕ್ಷಕ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಈ ಸಂಬಂಧ ವೇದಾವತಿ ತುಮಕೂರು ಮಹಿಳಾ ಠಾಣೆಗೆ ದೂರು ನೀಡಿದ್ದಳು. ಬಳಿಕ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ನ್ಯಾಯಾಲಯದಲ್ಲಿ ದಾಖಲೆ ಹಾಗೂ ಸಾಕ್ಷಿ ಕೇಳಲಾಗಿತ್ತು.

ವಿಡಿಯೋ ವೈರಲ್​

ಸಾಕ್ಷಿ ಕೇಳಿದ್ದರಿಂದ ಬೇಸತ್ತ ವೇದಾವತಿ ಸಂವಿಧಾನ ಬರೆದ ಡಾ. ಬಿ.ಆರ್ ಅಂಬೇಡ್ಕರ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ವಿಡಿಯೋ ಹರಿಬಿಟ್ಟಿದ್ದಳು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆದ ಬಳಿಕ ಶ್ರೀನಿವಾಸ್​ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ವೇದಾವತಿಯನ್ನು ಬಂಧಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net