More

    ಸಚಿವ ಸ್ಥಾನಕ್ಕಾಗಿ ಕಸರತ್ತು: ಸಿದ್ದು-ಡಿಕೆಶಿಗೂ ಮುನ್ನವೇ 3 ತಂಡಗಳಾಗಿ ದೆಹಲಿಗೆ ಹಾರಿದ ಶಾಸಕರು

    ಬೆಂಗಳೂರು: ಮುಖ್ಯಮಂತ್ರಿ ಸ್ಥಾನ ಖಚಿತವಾದ ಬಳಿಕ ಇದೀಗ ಸಂಪುಟ ರಚನೆಗೆ ಕಸರತ್ತು ಆರಂಭವಾಗಿದ್ದು, ಭಾವಿ ಸಿಎಂ ಸಿದ್ದರಾಮಯ್ಯ ಮತ್ತು ಭಾವಿ ಡಿಸಿಎಂ ಡಿ.ಕೆ. ಶಿವಕುಮಾರ್​ ಮತ್ತೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಅದಕ್ಕೂ ಮುನ್ನವೇ ಶಾಸಕರು ದೆಹಲಿ ಪ್ರಯಾಣಕ್ಕೆ ಅಣಿಯಾಗಿದ್ದು, ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್​ ಹೈಕಮಾಂಡ್ ಲಾಭಿಗೆ ಮುಂದಾಗಿದ್ದಾರೆ.

    ಮೂರು ತಂಡಗಳಾಗಿ ಬೆಳ್ಳಂಬೆಳಗ್ಗೆ ಶಾಸಕರು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೂರು ವಿಮಾನಗಳಲ್ಲಿ 22 ಜನ ಶಾಸಕರು ಪ್ರಯಾಣ ಬೆಳೆಸಿದ್ದಾರೆ. ಹಿರಿಯ ಶಾಸಕರ‌ ಜೊತೆಗೆ ನೂತನ ಶಾಸಕರು ಕೂಡ ಪ್ರಯಾಣ ಮಾಡಿದ್ದಾರೆ.

    ಇದನ್ನೂ ಓದಿ: ನಾಳೆ ನೂತನ ಸಿಎಂ ಪ್ರಮಾಣವಚನ; ಬೇರೆ ರಾಜ್ಯಗಳ ಸಿಎಂಗಳಿಗೆ ಕಾಂಗ್ರೆಸ್ ಆಹ್ವಾನ

    ಎರಡನೇ ಗುಂಪಿನಲ್ಲಿ ದೆಹಲಿಗೆ 06 ಜನ ಶಾಸಕರು 06.15ರ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಶಾಸಕರಾದ ಕೃಷ್ಣಬೈರೆಗೌಡ, ಎನ್ಎ ಹ್ಯಾರೀಸ್, ಶ್ರೀನಿವಾಸ್ ಮಾನೆ, ರಿಜ್ವಾನ್ ಹರ್ಷದ್, ಈಶ್ವರ್ ಖಂಡ್ರೆ, ರಹಿಂ ಖಾನ್ ಪ್ರಯಾಣ ಬೆಳೆಸಿದ್ದಾರೆ.

    ಮೂರನೆ ಗುಂಪಿನಲ್ಲಿ ಕೆ. ಎಚ್. ಮುನಿಯಪ್ಪ, ಶಿವರಾಜ್ ತಂಗಡಗಿ, ಸಿ.ಎಸ್. ನಾಡಗೌಡ, ಅಶೋಕ್ ರೈ, ಕೆ.ಎನ್. ರಾಜಣ್ಣ, ಕೆ.ಆರ್. ರಾಜೇಂದ್ರ, ಎಂಎಲ್​ಸಿ ಅರವಿಂದ ಅರಳಿ ಸಹ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬೆಳಗ್ಗೆ 7.20ರ ಏರ್ ಇಂಡಿಯಾ ವಿಮಾನದಲ್ಲಿ ದಹಲಿಗೆ ಪ್ರಯಾಣ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭ | ವೃತ್ತಿಪರ ಕೋರ್ಸುಗಳಿಗೆ ಎಂದಿನಂತೆ ಭಾರಿ ಸ್ಪರ್ಧೆ

    ಮದುವೆ ದಿನವೇ ವಿಷ ಸೇವಿಸಿ ಸಾವಿಗೆ ಶರಣಾಗಲು ಯತ್ನಿಸಿದ ನೂತನ ದಂಪತಿ; ದುರದೃಷ್ಟವಶಾತ್ ವರ ಯಶಸ್ವಿ…

    VIDEO VIRAL | ಕುಡಿದು ಕಾರು ಚಾಲನೆ ಮಾಡಿ ಅಪಘಾತ ಮಾಡಿದವನಿಗೆ ಮಹಿಳೆಯಿಂದ ಚಪ್ಪಲಿ ಏಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts