ನೂರು ದಿನಗಳು ನರೇಗಾ ಉದ್ಯೋಗ ನೀಡುವಂತೆ ಒತ್ತಾಯ

1 Min Read
ನೂರು ದಿನಗಳು ನರೇಗಾ ಉದ್ಯೋಗ ನೀಡುವಂತೆ ಒತ್ತಾಯ
oppo_2

ಹನೂರು: ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆಯಡಿ 100 ದಿನ ಉದ್ಯೋಗ ನೀಡಬೇಕು ಎಂದು ಹನೂರು ತಾಲೂಕಿನ ಹೂಗ್ಯಂ ಗ್ರಾಮದ ಮಹಿಳೆಯರು ಭಾನುವಾರ ಶಾಸಕ ಎಂ.ಆರ್. ಮಂಜುನಾಥ್ ಅವರಿಗೆ ಮನವಿ ಮಾಡಿದರು.

ಪಟ್ಟಣದ ಜೆಡಿಎಸ್ ಕಚೇರಿಗೆ ಭಾನುವಾರ ಭೇಟಿ ನೀಡಿ ಶಾಸಕ ಎಂ.ಆರ್.ಮಂಜುನಾಥ್ ಅವರ ಜತೆ ಮಾತನಾಡಿದ ಮಹಿಳೆಯರು, ಜಲಾಶಯದ ಹೂಳೆತ್ತುವ ಕಾಮಗಾರಿಯನ್ನು 15 ದಿನಗಳಿಗೆ ಸ್ಥಗಿತಗೊಳಿಸಿದ್ದಾರೆ. ಇದನ್ನೇ ನಂಬಿ ಜೀವನ ಮಾಡುತ್ತಿರುವ ನಮಗೆ ಉದ್ಯೋಗವಿಲ್ಲದಂತಾಗಿದೆ. ಈ ಹಿಂದೆ ಕೂಲಿಗಾಗಿ ತಮಿಳುನಾಡಿಗೆ ಹೋಗುತ್ತಿದ್ದೆವು. ಆದರೆ, ನಮ್ಮ ತಾಲೂಕಿನಲ್ಲಿಯೇ ಉದ್ಯೋಗ ಸೃಷ್ಟಿಸುತ್ತೀರಾ ಎಂಬ ಭರವಸೆ ಮೇರೆಗೆ ನಿಮ್ಮನ್ನು ಗೆಲ್ಲಿಸಿದ್ದೇವೆ. ಆದ್ದರಿಂದ ಉದ್ಯೋಗ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.

ಕಾರ್ಮಿಕ ಮಹಿಳೆ ನೆಮ್ಮರಾಜಮ್ಮ ಮಾತನಾಡಿ, ಗ್ರಾ.ಪಂ. ವತಿಯಿಂದ ಮನೆ ಮಂಜೂರಾಗಿದ್ದು, ಅಡಿಪಾಯ ಕಾಮಗಾರಿ ಮುಗಿದು 7 ವರ್ಷಗಳು ಕಳೆದಿವೆ. ಆದರೆ, ಮನೆ ನಿರ್ಮಾಣದ ಬಿಲ್ ಪಾವತಿಯಾಗಿಲ್ಲ. ಇದರಿಂದ ಇನ್ನೂ ಗುಡಿಸಿಲಿನಲ್ಲೇ ವಾಸ ಮಾಡಬೇಕಿದೆ. ವಿದ್ಯುತ್ ಇಲ್ಲದ ಪರಿಣಾಮ ಕತ್ತಲೆಯಲ್ಲೇ ಕಾಲ ಕಳೆಯಬೇಕಿದೆ. ಈ ಬಗ್ಗೆ ಹಲವು ಬಾರಿ ಗ್ರಾ.ಪಂ. ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಮಂಜುನಾಥ್, ಹನೂರು ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ, ನೀರಾವರಿ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಈಗಾಗಲೇ ಸಂಬಂಧಪಟ್ಟವರ ಭೇಟಿಯಾಗಿ ಕಾಮಗಾರಿ ಪ್ರಾರಂಭಿಸಲು ಕೋರಲಾಗಿದೆ. ಕ್ಷೇತ್ರವನ್ನು ಹಂತಹಂತವಾಗಿ ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲಾಗುವುದು ಎಂದರು.

ನರೇಗಾದಡಿ ಉದ್ಯೋಗ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಉದ್ಯೋಗ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಹೂಗ್ಯಂ ಗ್ರಾಮದ ಸಾಕಮ್ಮ, ಹೊನ್ನಮ್ಮ, ತಂಗಮ್ಮ, ರಾಜಮ್ಮ, ಪುಟ್ಟಿರಮ್ಮ, ಬಣ್ಣಮ್ಮ, ದೊಡ್ಡಮ್ಮ, ಚಿನ್ನಮ್ಮ ಸೇರಿದಂತೆ 40ಕ್ಕೂ ಹೆಚ್ಚು ಮಹಿಳೆಯರು ಇದ್ದರು.

See also  ಅಂತರ್ ಜಿಲ್ಲಾ ಮೂವರು ಮನೆಗಳ್ಳರ ಬಂಧನ
TAGGED:
Share This Article