ರಾತ್ರಿ ಮಲಗಿದ್ದ ಯುವಕ ಬೆಳಗ್ಗೆ ನಾಪತ್ತೆ, 4 ದಿನ ಕಳೆದರೂ ಪತ್ತೆ ಇಲ್ಲ; ನಕ್ಸಲ್​ಪೀಡಿತ ಪ್ರದೇಶದಲ್ಲೀಗ ಆತಂಕ!

Mudur
ಸಾಂದರ್ಭಿಕ ಚಿತ್ರ
Published on

ಉಡುಪಿ: ನಕ್ಸಲ್​ಪೀಡಿತ ಪ್ರದೇಶದಲ್ಲಿನ ಮನೆಯೊಂದರ ಯುವಕ ರಾತ್ರಿ ಬೆಳಗಾಗುವುದರೊಳಗೆ ನಾಪತ್ತೆ ಆಗಿದ್ದು, ಆ ಪ್ರದೇಶದ ಜನರಲ್ಲೀಗ ಆತಂಕ ಉಂಟಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಈ ಪ್ರಕರಣ ನಡೆದಿದೆ.

ಬೈಂದೂರಿನ ಮುದೂರು ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಸುರೇಶ್ (28) ನಾಪತ್ತೆಯಾದ ಯುವಕ. ಕಾಣೆಯಾಗಿ ನಾಲ್ಕು ದಿನಗಳು ಕಳೆದರೂ ಇನ್ನೂ ಪತ್ತೆಯಾಗಿಲ್ಲ. ನಕ್ಸಲ್​ಪೀಡಿತ ಪ್ರದೇಶವಾದ್ದರಿಂದ ಸುತ್ತಮುತ್ತಲ ಜನರಲ್ಲಿ ಆತಂಕ ಉಂಟಾಗಿದೆ.

ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಕಾಣೆಯಾದ ಯುವಕನ ಹುಡುಕಾಟಕ್ಕೆ ಕೊಲ್ಲೂರು ಪಿಎಸ್‌ಐ ಜಯಲಕ್ಷ್ಮಿ ಮತ್ತು ತಂಡದವರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net