More

    ಇದು ಚಾರ್ಮಾಡಿ ಘಾಟಿಯಲ್ಲ: ಪೊಲೀಸರಿಂದಲೇ ಸ್ಪಷ್ಟನೆ, ಯಾಕೆ?

    ಬೆಂಗಳೂರು: ಇದು ಚಾರ್ಮಾಡಿ ಘಾಟಿಯಲ್ಲಿನ ದೃಶ್ಯ ಎಂಬ ಶೀರ್ಷಿಕೆಯೊಂದಿಗೆ ಕಳೆದ ಕೆಲವು ದಿನಗಳಿಂದ ಒಂದು ವಿಡಿಯೋ ವಾಟ್ಸ್​ಆ್ಯಪ್ ಮುಂತಾದ ಮೆಸೇಜಿಂಗ್ ಆ್ಯಪ್​ಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಕುರಿತಂತೆ ಇದೀಗ ಪೊಲೀಸರೇ ಸ್ಪಷ್ಟನೆಯೊಂದನ್ನು ನೀಡಿದ್ದಾರೆ.

    ಈ ವೀಡಿಯೋ ಮಹಾರಾಷ್ಟ್ರದ ಅಂಬೊಲಿ ಘಾಟ್‌ ರಸ್ತೆಯಲ್ಲಿ 2 ವರ್ಷಗಳ ಹಿಂದೆ ನಡೆದ ಘಟನೆಯಾಗಿದೆ. ಈ ವೀಡಿಯೋದಲ್ಲಿರುವ ಪ್ರದೇಶ ಚಾರ್ಮಾಡಿ ಘಾಟ್‌ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇಂತಹ ಘಟನೆ ಚಾರ್ಮಾಡಿ ಘಾಟಿಯಲ್ಲಿ ಸಂಭವಿಸಿರುವುದಿಲ್ಲ. ಚಾರ್ಮಾಡಿ ಘಾಟಿಯಲ್ಲಿ ಎಂದಿನಂತೆ ವಾಹನಗಳು ಸಂಚರಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಶೀಲಿಸದ ವೀಡಿಯೋಗಳನ್ನು ಶೇರ್ ಮಾಡದಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ ಎಂದು ಸ್ಪಷ್ಟನೆ ನೀಡಿರುವ ಪೊಲೀಸರು ನೈಜ ಘಟನೆಯ ಲಿಂಕ್ ಕೂಡ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಪಾಕ್​ಗೆ ತೆರಳಿದ ಭಾರತದ ಅಂಜು ಇನ್ಮುಂದೆ ಫಾತಿಮಾ: ಮತಾಂತರಗೊಂಡು ನಸ್ರುಲ್ಲಾನನ್ನು ಮದ್ವೆಯಾದ ವಿವಾಹಿತೆ!

    ಮಳೆ, ಪ್ರವಾಹ, ಭೂಕುಸಿತ, ಭೂಕಂಪ ಮುಂತಾದ ಸಂದರ್ಭಗಳಲ್ಲಿ ಎಲ್ಲೆಲ್ಲಿಯದ್ದೋ ಅಂಥದ್ದೇ ದೃಶ್ಯಗಳ ವಿಡಿಯೋಗಳು ಇನ್ನೆಲ್ಲಿಯದ್ದೋ ಎಂಬಂತೆ ಬಿಂಬಿಸಿ ಹರಿಯಬಿಡುವುದು ಆಗಾಗ ನಡೆಯುತ್ತಿರುತ್ತದೆ. ಈ ವಿಡಿಯೋಗೂ ಸಂಬಂಧಿಸಿದಂತೆ ಅಂಥದ್ದೇ ಪ್ರಕರಣ ನಡೆದಿದೆ.

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts