ಹೆಂಡ್ತಿ ತವರಿಗೆ ಹೋದ ಖುಷಿಯಲ್ಲಿ ಎಣ್ಣೆ ಪಾರ್ಟಿ... ಅದೇ ಬಾಟಲಿನಲ್ಲಿ ನಡೆದೇ ಹೋಯ್ತು ಘೋರ ಕೃತ್ಯ!

mani murder case
Published on

ಬೆಂಗಳೂರು: ತಾವೇ ಆಯೋಜಿಸಿದ್ದ ಎಣ್ಣೆ ಪಾರ್ಟಿಯಲ್ಲಿ ಜಾಸ್ತಿ ಮದ್ಯ ಕುಡಿದ ಕಾರಣಕ್ಕೆ ಯುವಕನೊಬ್ಬನನ್ನು ಸ್ನೇಹಿತರೇ ಹತ್ಯೆ ಮಾಡಿದ್ದು, ಹಂತಕರು ಸ್ಥಿತಿ ಏನಾಗಿದೆ ಗೊತ್ತಾ?

ಬಿರಿಯಾನಿ ಅಂಗಡಿ ಮಾಲೀಕ ಕೃಷ್ಣಮೂರ್ತಿ ತನ್ನ ಪತ್ನಿ ತವರಿಗೆ ಹೋದ ಖುಷಿಯಲ್ಲಿ ಮೇ 31ರ ರಾತ್ರಿ ಸ್ನೇಹಿತರಾದ ಕೃಷ್ಣಮೂರ್ತಿ, ಸಂದೀಪ್ ರೆಡ್ಡಿ, ರೇವಣಸಿದ್ದಯ್ಯ, ಮಣಿ ಸೇರಿ ಇತರೊಂದಿಗೆ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಎಣ್ಣೆ ಪಾರ್ಟಿ ಆಯೋಜಿಸಿದ್ದ. ಈ ವೇಳೆ ಮಣಿ ಹೆಚ್ಚು ಎಣ್ಣೆ ಕುಡಿಯುತ್ತಾನೆ ಅಂತ ಗಲಾಟೆ ನಡೆದಿತ್ತು. ವಿಕೋಪಕ್ಕೆ ತಿರುಗಿದ ಗಲಾಟೆಯಲ್ಲಿ ಸಿಟ್ಟಿಗೆದ್ದ ಸ್ನೇಹಿತರು ಬಿಯರ್ ಬಾಟಲಿನ ಚೂರಿನಿಂದ ಮಣಿ(26) ಯ ಕತ್ತು ಕೊಯ್ದು ಹತ್ಯೆ ಮಾಡಿದ್ದರು.

ಮೋಜು-ಮಸ್ತಿ ಮಾಡಲು ಆಯೋಜಿಸಿದ್ದ ಪಾರ್ಟಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಹೆಣ ಮಾಡಿದ ಹಂತಕರ ಪೈಕಿ ಮೂವರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಕೃಷ್ಣಮೂರ್ತಿ, ಸಂದೀಪ್ ರೆಡ್ಡಿ ಮತ್ತು ರೇವಣಸಿದ್ದಯ್ಯ ಬಂಧಿತರು. ಮತ್ತಿಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net