ಖಿನ್ನತೆಗೆ ಬಲಿಯಾದರೆ ಸುಶಾಂತ್​? ಇವರ ಟ್ವಿಟರ್​ ಕವರ್​ ಪೇಜ್​ನ ವರ್ಣಚಿತ್ರಕಾರನೂ ಗುಂಡಿಕ್ಕಿಕೊಂಡು ಸತ್ತಿದ್ದ!

Sushant Singh Rajpu twitter
Published on

ಮುಂಬೈ: ಬಾಲಿವುಡ್ ಯುವನಟ, ಸ್ಫುರದ್ರುಪಿ ಯುವಕ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ ಅವರ ಟ್ವಿಟರ್ ಕವರ್​ ಪೇಜ್​ನ ವರ್ಣಚಿತ್ರಕಾರನೂ ಆತ್ಮಹತ್ಯೆಗೆ ಶರಣಾಗಿದ್ದ ಎನ್ನುವ ವಿಚಾರ ಚರ್ಚೆಯಾಗುತ್ತಿದೆ.

ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್​ ತನ್ನ ಟ್ವಿಟರ್​ಗೆ ಕವರ್​ ಚಿತ್ರವನ್ನಾಗಿ ಖ್ಯಾತ ವರ್ಣಚಿತ್ರಕಾರ ಡಚ್‍ನ ವಿನ್ಸೆಂಟ್ ವಿಲ್ಲೆಮ್ ವಾನ್ ಗೋ ಅವರ “ಸ್ಟಾರಿ ನೈಟ್ಸ್” ಎಂಬ ಪ್ರಸಿದ್ಧ ಚಿತ್ರಕಲೆಯನ್ನು ಹಾಕಿಕೊಂಡಿದ್ದರು. ಆದರೆ, ಈ ಚಿತ್ರವನ್ನು ಸ್ವತಃ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸಮಯದಲ್ಲಿ ವಿನ್ಸೆಂಟ್ ವಾನ್ ಗೋ ಚಿತ್ರಿಸಿದ್ದರಂತೆ. ಇದನ್ನೂ ಓದಿರಿ ನಟ ಸುಶಾಂತ್​ ಸಾವಿಗೆ ಕಂಬನಿ ಮಿಡಿದ ಪ್ರಧಾನಿ ಮೋದಿ

ವಿನ್ಸೆಂಟ್ ವಿಲ್ಲೆಮ್ ವಾನ್ ಗೋ ಅವರ “ಸ್ಟಾರಿ ನೈಟ್ಸ್” ಚಿತ್ರ.
ವಿನ್ಸೆಂಟ್ ವಿಲ್ಲೆಮ್ ವಾನ್ ಗೋ ಅವರ “ಸ್ಟಾರಿ ನೈಟ್ಸ್” ಚಿತ್ರ.

1889ರಲ್ಲಿ ವಿನ್ಸೆಂಟ್ ವಾನ್ ಗೋ ಖಿನ್ನತೆಯಿಂದ ಬಳಲುತ್ತಿರುವಾಗ ಸ್ಟಾರಿ ನೈಟ್ ಅನ್ನು ಚಿತ್ರಿಸಿದ್ದರು. ಇದಾದ ಬಳಿಕ ಅಂದರೆ 1890ರ ಜುಲೈ 29ರಂದು ಬೆಳಗ್ಗೆ ಉತ್ತರ ಫ್ರಾನ್ಸ್‌ನ ಆವೆರ್ಸ್ ಸುರ್ ಓಯಿಸ್​ನಲ್ಲಿರುವ ಮನೆಯ ಕೋಣೆಯಲ್ಲಿ ಹೊಟ್ಟೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

1853ರ ಮಾರ್ಚ್ 30ರಂದು ಜನಿಸಿದ್ದ ವಿನ್ಸೆಂಟ್ ವಾನ್ ಗೋ 1890ರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ 37ರ ವಯಸ್ಸಿಗೇ ಬದುಕನ್ನು ದುರಂತ ಅಂತ್ಯವಾಗಿಸಿಕೊಂಡರು. ಇವರು ಪ್ರಾಣಹತ್ಯೆ ಮಾಡಿಕೊಂಡದ್ದು ತಾನೇ ರಚಿಸಿದ ಕೃತಿಯೊಂದರ (ಕಾರ್ನ್ಫೀಲ್ದ್ಸ್ ವಿತ್ ಫ್ಲೈಟ್ ಆಫ್ ಬಡ್ರ್ಸ್‌) ಎದುರಿನಲ್ಲಿ.

ವಿನ್ಸೆಂಟ್ ವಿಲ್ಲೆಮ್ ವಾನ್ ಗೋ
ವಿನ್ಸೆಂಟ್ ವಿಲ್ಲೆಮ್ ವಾನ್ ಗೋ

ಸುಶಾಂತ್​ ಕೂಡ ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗುತ್ತಿದ್ದು, ಈ ಹಿಂದೆ ಅವರು ಟ್ವಿಟರ್​ ಕವರ್​ ಪೇಜ್​ಗೆ ಹಾಕಿಕೊಂಡಿದ್ದ ಡಚ್ ವರ್ಣಚಿತ್ರಕಾರನ ಚಿತ್ರದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಸೇಂಟ್ ರೆಮಿ ಡಿ ಪ್ರೊವೆನ್ಸ್‌ನಲ್ಲಿ ವಿನ್ಸೆಂಟ್ ವಾನ್ ಗೋ ಆಶ್ರಯಿಸಿದ್ದ ವೇಳೆ ಈ ಚಿತ್ರವನ್ನು ರಚಿಸಿದ್ದು, ಇದು ಸೂರ್ಯೋದಯಕ್ಕೂ ಮುನ್ನ ಒಂದು ಆದರ್ಶ ಹಳ್ಳಿಯನ್ನು ಚಿತ್ರಣವನ್ನು ತೋರಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net