ಪದವಿ ವ್ಯಾಸಂಗ ಮುಗಿದರೂ ಸಿಗದ ಉದ್ಯೋಗ; ಮನನೊಂದು ಪ್ರಾಣಬಿಟ್ಟ ಯುವಕ

Sidduprasada Birala
Published on

ಕಲಬುರಗಿ: ಪದವಿ ಮುಗಿಸಿದರೂ, ಉದ್ಯೋಗ ಸಿಗದ ಹಿನ್ನೆಲೆ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಿದ್ದುಪ್ರಸಾದ ಬಿರಾಳ.ಬಿ(26) ನೇಣಿಗೆ ಶರಣಾದ ಯುವಕ.

ಸ್ನೇಹಿತರೊಂದಿಗೆ ವಾಸವಿದ್ದ

ಜೇವರ್ಗಿ ಪಟ್ಟಣದ ನ್ಯಾಯಾಲಯ ಮುಂದಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ಸಿದ್ದುಪ್ರಸಾದ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಸ್ನೇಹಿತರೊಂದಿಗೆ ವಸತಿ ನಿಲಯದಲ್ಲಿ ವಾಸವಿದ್ದ.

ಮಾನಸಿಕವಾಗಿ ಕುಗ್ಗಿದ್ದ!

ಸಿದ್ದುಪ್ರಸಾದ ಬಿರಾಳ ಪದವಿ ಮುಗಿಸಿದ್ದ. ಆದರೆ ಸೂಕ್ತವಾದ ಉದ್ಯೋಗ ಮಾತ್ರ ಸಿಕ್ಕಿರಲಿಲ್ಲ. ಇದರಿಂದ ಸಿದ್ದು ಮಾನಸಿಕವಾಗಿ ಕುಗ್ಗಿ ಹೋಗಿದ್ದ ಎನ್ನಲಾಗಿದೆ. ಇದೀಗ ಪದವಿ ವ್ಯಾಸಾಂಗ ಮುಗಿದು ವರ್ಷ ಕಳೆದರೂ ಉದ್ಯೋಗ ಸಿಗದ ಹಿನ್ನೆಲೆ ನೇಣು ಹಾಕಿಕೊಂಡಿದ್ದಾನೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net