ವಾಯುವಿಹಾರಕ್ಕೆ ತೆರಳುವ ಮಹಿಳೆಯರೇ ಇವರ ಟಾರ್ಗೆಟ್!

CCTV Crime
Published on

ಬೆಂಗಳೂರು: ವಾಯುವಿಹಾರ ತೆರಳುತ್ತಿದ್ದ ವೃದ್ಧೆಯ ಸರ ಕಳವು ಮಾಡಿದ ಇಬ್ಬರು ಕಳ್ಳರು, ಸಾರ್ವಜನಿಕರಿಗೆ ಹೆದರಿ ಬೈಕ್ ಬಿಟ್ಟು ಪರಾರಿಯಾಗಿರುವ ಪ್ರಕರಣ ರಾಮಮೂರ್ತಿನಗರ ನಡೆದಿದೆ. ರಾಮಮೂರ್ತಿನಗರ ನಿವಾಸಿ ಶಕುಂತಲಾ (62) ಸರ ಕಳೆದುಕೊಂಡವರು.

ಹಿಂದಿನಿಂದ ಸರ ಕಸಿದುಕೊಂಡ!

ಏ.18 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಮನೆ ಬಳಿ ಶಕುಂತಲಾ ವಾಯುವಿಹಾರಕ್ಕೆ ಹೋಗುತ್ತಿದ್ದರು. ಆಗ ಹಿಂದಿನಿಂದ ಬೈಕ್‌ನಲ್ಲಿ ಹಿಂಬಾಲಿಸಿದ ಕಳ್ಳರ ಪೈಕಿ ಒಬ್ಬ ಬೈಕ್‌ನಿಂದ ಕೆಳಗೆ ಇಳಿದು ಸರ ಕಸಿದುಕೊಂಡಿದ್ದಾನೆ. ಬಳಿಕ ಬೈಕ್ ಹತ್ತುವಷ್ಟರಲ್ಲಿ ವೃದ್ಧೆ ಶಕುಂತಲಾ ಜೋರಾಗಿ ಕೂಗಿಕೊಂಡಿದ್ದಾರೆ. ಕೂಡಲೇ ಸ್ಥಳೀಯರೊಬ್ಬರು ಕಳ್ಳರ ಬೈಕ್‌ಗೆ ಡಿಕ್ಕಿ ಹೊಡೆದು ಬೀಳಿಸಿದ್ದಾರೆ.

ದೂರು ದಾಖಲು

ಆದರೆ, ಇಬ್ಬರು ಸಾರ್ವಜನಿಕರನ್ನು ತಳ್ಳಿ ಪರಾರಿಯಾಗಿದ್ದಾರೆ. ಬೈಕ್ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಅದು ಕಳವು ಮಾಡಲಾದ ಬೈಕ್ ಎಂಬುದು ಗೊತ್ತಾಗಿದೆ. ಬೈಕ್ ಕಳ್ಳತನವಾಗಿರುವ ಬಗ್ಗೆ ದೂರು ಸಹ ದಾಖಲಾಗಿದೆ. ಸ್ಥಳೀಯ ಸಿಸಿ ಕ್ಯಾಮರಾ ಆಧರಿಸಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net