More

    ನಿಯಮ ಉಲ್ಲಂಘಿಸುವ ವಾಹನ ಸವಾರರೇ ಹುಷಾರ್; ಚುನಾವಣೆ ಬಳಿಕ ಮನೆಗೆ ಬಂದು ದಂಡ ಸಂಗ್ರಹಿಸಲಿದ್ದಾರೆ ಪೊಲೀಸರು!

    ಬೆಂಗಳೂರು: ರಸ್ತೆಯಲ್ಲಿ ನಿಂತು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸುವುದನ್ನು ಕಡಿಮೆ ಮಾಡಿರುವ ಬೆಂಗಳೂರು ಸಂಚಾರು ಪೊಲೀಸರು, ಸದ್ಯ ಇಂಟಲಿಜೆನ್ಸ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂನ (ಐಟಿಎಂಎಸ್) ಕ್ಯಾಮರಾದ ಮೂಲಕ ದಂಡ ವಿಧಿಸುತ್ತಿದ್ದಾರೆ. ಈ ವಿಧಾನದ ಮೂಲಕ 18 ಲಕ್ಷ ಪ್ರಕರಣಗಳನ್ನು ದಾಖಲಿಸಿಲಾಗಿದೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಮಾಹಿತಿ ನೀಡಿ, ಕಳೆದ ವರ್ಷ ಡಿಸೆಂಬರ್‌ನಿಂದ ಐಟಿಎಂಎಸ್ ಕ್ಯಾಮೆರಾ ವ್ಯವಸ್ಥೆಯನ್ನು ಆರಂಭಿಸಲಾಗಿದ್ದು, ಈ ವರ್ಷದ ಆರಂಭದಿಂದಲೇ ವಾಹನಗಳನ್ನ ತಡೆದು ದಂಡ ವಿಧಿಸುವುದನ್ನ ಕಡಿಮೆ ಮಾಡಿದ್ದೇವೆ. ಶೇ.96 ರಷ್ಟು ಪ್ರಕರಣಗಳನ್ನು ಐಟಿಎಂಎಸ್ ಮೂಲಕ ದಾಖಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: VIDEO | ಪಿಂಚಣಿ ಹಣ ಪಡೆಯಲು 70 ವರ್ಷದ ವೃದ್ಧೆ ಸುಡುವ ಬಿಸಿಲಿನಲ್ಲಿ ನಡೆದೇ ಬರಬೇಕಾಯ್ತು!

    ಮನೆಗೆ ತೆರಳಿ ದಂಡ ವಸೂಲಿ

    ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಾಲನೆ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಸೇರಿ ಕಳೆದ ಮೂರೂವರೆ ತಿಂಗಳ ಅವಧಿಯಲ್ಲಿ ಬರೋಬ್ಬರಿ 19,04,227 ಪ್ರಕರಣಗಳನ್ನ ದಾಖಲಿಸಿದ್ದು, ಆ ಪೈಕಿ 18 ಲಕ್ಷ ಪ್ರಕರಣಗಳನ್ನು ಐಟಿಎಂಎಸ್ ಮೂಲಕ ಆನ್‌ಲೈನ್‌ನಲ್ಲಿ ದಾಖಲಿಸಲಾಗಿದೆ. ಈಗಾಗಲೇ ಹೆಚ್ಚು ಪ್ರಕರಣಗಳು ದಾಖಲಾಗಿರುವ ವಾಹನಗಳ ಮಾಲೀಕರಿಗೆ ಸಂಚಾರಿ ಪೊಲೀಸರು ನೊಟೀಸ್ ರವಾನಿಸಿದ್ದಾರೆ. ಚುನಾವಣೆ ಮುಗಿದ ಬಳಿಕ ಮನೆ ಮನೆಗೆ ತೆರಳಿ ದಂಡ ವಸೂಲಿ ಮಾಡಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

    ನಿಯಮ ಉಲ್ಲಂಘಿಸುವ ಸವಾರರೇ ಹುಷಾರ್

    ವಾಹನಗಳನ್ನು ತಡೆದು ದಂಡ ಹಾಕುತಿದ್ದ ಪೊಲೀಸರು ಎಲೆಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಸಂಚಾರಿ ಪೊಲೀಸರು ಕಾಣಿಸುತ್ತಿಲ್ಲ ಎಂದು ಹೇಳಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರೇ ಹುಷಾರ್, ಏಕೆಂದರೆ ಪೊಲೀಸರು ವಾಹನವನ್ನು ತಡೆದು ತಪಾಸಣೆ ಮಾಡುವುದನ್ನು ನಿಲ್ಲಿಸಿದ್ದಾರೆ. ಆದರೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ನಿಮಗೆ ಮಾತ್ರ ಸಂಕಷ್ಟ ತಪ್ಪಿದಲ್ಲ. ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಐಟಿಎಂಎಸ್ ಕ್ಯಾಮರಾ ಅಳವಡಿಸಲಾಗಿದ್ದು, ಅವು ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಮಾಹಿತಿಯನ್ನು ಫೋಟೋ ಸಮೇತ ನೀಡುತ್ತದೆ.

    ಇದನ್ನೂ ಓದಿ: ಸಿದ್ದರಾಮಯ್ಯ ಕೋಟಿಗಟ್ಟಲೇ ಸಾಲಗಾರ! ಮಾಜಿ ಸಿಎಂಗಿಂತ ಪತ್ನಿಯೇ ಶ್ರೀಮಂತೆ

    ಆನ್​ಲೈನ್​ನಲ್ಲಿ ದಿನಕ್ಕೆ 30 ರಿಂದ 35 ಸಾವಿರ ಪ್ರಕರಣಗಳು ರಿಜಿಸ್ಟರ್

    ದಿನಕ್ಕೆ 30 ರಿಂದ 35 ಸಾವಿರ ಪ್ರಕರಣಗಳು ಆನ್‌ಲೈನ್‌ನಲ್ಲಿ ರಿಜಿಸ್ಟರ್ ಆಗುತ್ತಿದೆ. ಹೆಲ್ಮೇಟ್ ರಹಿತ ಚಾಲನೆ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಸೇರಿ ಇತರೆ ಸಂಚಾರ ನಿಯಮ ಪ್ರಕರಣಗಳು ದಾಖಲಾಗುತ್ತಿವೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಲಕ್ಷ ಲಕ್ಷ ಪ್ರಕರಣಗಳು ದಾಖಲಾಗಿವೆ. ಇಷ್ಟು ಪ್ರಮಾಣದ ಪ್ರಕರಣಗಳು ದಾಖಲಾದ ಬಳಿಕವೂ ಯಾರೊಬ್ಬರೂ ದಂಡದ ಮೊತ್ತವನ್ನು ಮಾತ್ರ ಕಟ್ಟಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಮನೆ ಬಾಗಿಲಿಗೆ ನೋಟಿಸ್ ಕಳಿಸಲು ಸಂಚಾರಿ ಪೊಲೀಸರು ತೀರ್ಮಾನ ಮಾಡಿದ್ದಾರೆ. ಈಗಾಗಲೇ ರೂಲ್ಸ್ ಬ್ರೇಕ್ ಮಾಡಿರುವವರ ಕೆಲವರ ಮನೆಗಳಿಗೆ ನೊಟೀಸ್ ಕಳಿಸಲಾಗಿದೆ. ಆದರೆ ಇದಕ್ಕೆ ಸವಾರರು ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಎಲೆಕ್ಷನ್ ಬಳಿಕ ಅತಿ ಹೆಚ್ಚು ರೂಲ್ಸ್ ಬ್ರೇಕ್ ಮಾಡಿದವರ ಮನೆಗೆ ಹೋಗಿ ದಂಡ ಕಟ್ಟಿಸಿಕೊಳ್ಳಲು ನಿರ್ಧರಿಸಲಾಗಿದೆ.

    ಐಟಿಎಂಎಸ್ ತಂತ್ರಜ್ಞಾನದ ಸದ್ಬಳಕೆಯಿಂದ ಸಂಚಾರ ಪೊಲೀಸರು ನಗರದಲ್ಲಿನ ವಾಹನಗಳ ನಿಯಂತ್ರಣ, ಸಂಚಾರ ದಟ್ಟಣೆಯನ್ನ ತಡೆಗಟ್ಟುವ ಕಡೆ ಗಮನಹರಿಸಲು ಅನುಕೂಲವಾಗುತ್ತಿದೆ.
    ಡಾ.ಎಂ.ಎ.ಸಲೀಂ, ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts